ಬಡ್ಡಿ ದರ ಹೆಚ್ಚಿಸಿ

7

ಬಡ್ಡಿ ದರ ಹೆಚ್ಚಿಸಿ

Published:
Updated:

‘ಪ್ರಧಾನಮಂತ್ರಿ ವಯ ವಂದನಾ ಯೋಜನೆ’ಯಲ್ಲಿ ಹೂಡಿಕೆಯ ಮಿತಿಯನ್ನು ₹ 7.5 ಲಕ್ಷದಿಂದ ₹ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ (ಪ್ರ.ವಾ.,ಮೇ 3). ಇದು ಈಗಾಗಲೇ ನಿವೃತ್ತಿ ಆದವರಿಗೆ ಹೆಚ್ಚಿನ ಖುಷಿ ಕೊಡುವ ಸುದ್ದಿಯಲ್ಲ. ಇನ್ನು ನಿವೃತ್ತಿ ಹೊಂದುವವರಿಗೆ ಉಪಯೋಗವಾಗಬಹುದೇನೋ!

ಹೂಡಿಕೆಯ ಮಿತಿಯನ್ನು ಹೆಚ್ಚಿಸುವ ಬದಲು, 60 ವರ್ಷ ಮೀರಿದ ಹಿರಿಯ ನಾಗರಿಕರನ್ನು ವಯಸ್ಸಿಗೆ ಅನುಗುಣವಾಗಿ ನಾಲ್ಕು– ಐದು ಗುಂಪುಗಳಲ್ಲಿ ವಿಂಗಡಿಸಿ, ಅದಕ್ಕೆ ಅನುಗುಣವಾಗಿ ಅವರ ಠೇವಣಿಗೆ ಹೆಚ್ಚು ಹೆಚ್ಚು ಬಡ್ಡಿ ದರವನ್ನು ನಿಗದಿ ಮಾಡಿದರೆ ಬಡ್ಡಿಯನ್ನೇ ನಂಬಿ ಬದುಕುತ್ತಿರುವ ಹಿರಿಯರಿಗೆ ಅನುಕೂಲವಾಗಬಹುದು.

ಇನ್ನೊಂದು ವಿಚಾರ; ಈ ಸುದ್ದಿಯ ಜೊತೆಗೆ ಪ್ರಕಟಿಸಿರುವ ಸಾಂದರ್ಭಿಕ ಚಿತ್ರ ಹಿರಿಯ ನಾಗರಿಕರನ್ನು ಅವಮಾನಿಸುವಂತಿದೆ.

–ಪ್ರಹ್ಲಾದ ರಾವ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry