ಸೋಮವಾರ, ಮಾರ್ಚ್ 8, 2021
24 °C

ಪ್ರಚಾರಕ್ಕೆ ಸೈಕಲ್ ಏರಿದ ಖೇಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಚಾರಕ್ಕೆ ಸೈಕಲ್ ಏರಿದ ಖೇಣಿ

ಜನವಾಡ: ಬೀದರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಖೇಣಿ ಮತದಾರರನ್ನು ಸೆಳೆಯಲು ದಿನಕ್ಕೊಂದು ಹೊಸ ಪ್ರಚಾರ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.

ಖೇಣಿ ಅವರು ಗುರುವಾರವಷ್ಟೇ ಕ್ಷೇತ್ರ ವ್ಯಾಪ್ತಿಯ ಆಣದೂರು ಗ್ರಾಮದ ಸಲೂನ್‌ನಲ್ಲಿ ವ್ಯಕ್ತಿಯೊಬ್ಬರ ಕೂದಲು ಕತ್ತರಿಸುವ ಮೂಲಕ ಮತಯಾಚಿಸಿ ಸುದ್ದಿ ಮಾಡಿದ್ದರು. ಐಷಾರಾಮಿ ಕಾರುಗಳ ಒಡೆಯರಾಗಿರುವ ಅವರು ಶುಕ್ರವಾರ ಘೋಡಂಪಳ್ಳಿ ಗ್ರಾಮದಲ್ಲಿ ಸೈಕಲ್‌ ಏರಿ ಗಮನ ಸೆಳೆದರು.

ಬೆಂಬಲಿಗರ ಸಹಾಯದಿಂದ ಸೈಕಲ್‌ ಹತ್ತಿದ ಅವರು ಸ್ವಲ್ಪ ದೂರದವರೆಗೆ ಚಲಾಯಿಸಿದರು. ಇದೇ ಗ್ರಾಮದ ಹೋಟೆಲ್‌ನಲ್ಲಿ ಚಹಾ ಪಾತ್ರೆಯಲ್ಲಿ ಸೌಟು ತಿರುವಿ ಮತದಾರರ ಗಮನ ಸೆಳೆಯಲು ಪ್ರಯತ್ನಿಸಿದರು.

ಶಾಸಕ ಖೇಣಿ ಚಹಾ ಪಾತ್ರೆಯಲ್ಲಿ ಸೌಟು ತಿರುವಿ ಮತದಾರರ ಗಮನ ಸೆಳೆಯಲು ಯತ್ನಿಸಿದ್ದು ಹೀಗೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.