ಮಂಗಳವಾರ, ಮಾರ್ಚ್ 9, 2021
23 °C

ಸಚಿವ ಅನಂತಕುಮಾರ ಹೆಗಡೆ ಕಾರು ಅಪಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಚಿವ ಅನಂತಕುಮಾರ ಹೆಗಡೆ ಕಾರು ಅಪಘಾತ

ಕಾರವಾರ: ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಅವರ ಕಾರು ಕುಮಟಾ ತಾಲ್ಲೂಕಿನ ಕತಗಾಲ ಬಳಿ ಬೆಂಗಾವಲು ವಾಹನಕ್ಕೆ ಡಿಕ್ಕಿಯಾಗಿದೆ. ಯಾರಿಗೂ ಗಾಯಗಳಾಗಿಲ್ಲ. ಅವರ ಕಾರಿನ ಮುಂಭಾಗ ಜಖಂಗೊಂಡಿದೆ.

ಮುಂದೆ ಸಾಗುತ್ತಿದ್ದ ಪೊಲೀಸ್ ಕಾರಿಗೆ ವಾಹನವೊಂದು ಅಡ್ಡ ಬಂದ ಕಾರಣ ಚಾಲಕ ತಕ್ಷಣ ಬ್ರೇಕ್ ಹಾಕಿದರು. ಅದರ ಹಿಂದಿದ್ದ ಸಚಿವರ ಕಾರು  ಚಾಲಕ ಕೂಡ ಬ್ರೇಕ್ ಹಾಕಿದರೂ ಬೆಂಗಾವಲು ಕಾರಿಗೆ ಡಿಕ್ಕಿಯಾಗಿದೆ. ಎರಡೂ ವಾಹನಗಳಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ. ಪೊಲೀಸರು ಕೂಡಲೇ ಮತ್ತೊಂದು ವಾಹನದ ಮೂಲಕ ಸಚಿವರನ್ನು ಹೊನ್ನಾವರಕ್ಕೆ ಕಳುಹಿಸಿಕೊಟ್ಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.