ರಾಹುಲ್ ರೋಡ್ ಷೋ; ಭರ್ಜರಿ ಪ್ರಚಾರ

7

ರಾಹುಲ್ ರೋಡ್ ಷೋ; ಭರ್ಜರಿ ಪ್ರಚಾರ

Published:
Updated:
ರಾಹುಲ್ ರೋಡ್ ಷೋ; ಭರ್ಜರಿ ಪ್ರಚಾರ

ಬೆಂಗಳೂರು: ಪಕ್ಷದ ಅಭ್ಯರ್ಥಿಗಳ ಪರ ಬುಧವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಗರದ ವಿವಿಧ ಕಡೆ ರೋಡ್ ಷೋ, ಪ್ರಚಾರ ನಡೆಸಿದರು.

ಹೊಸೂರು ರಸ್ತೆಯಲ್ಲಿ ಗಾರ್ಮೆಂಟ್ಸ್ ಮಹಿಳಾ ನೌಕರರ ಜೊತೆ ರಾಹುಲ್ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ರಾಹುಲ್‌ಗೆ ಪುತ್ರಿ ಸೌಮ್ಯಾ ರೆಡ್ಡಿಯನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ಪರಿಚಯಿಸಿದರು.

‘ಕೇಂದ್ರ ಸರ್ಕಾರ 15 ಉದ್ಯಮಿಗಳ ₹2 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ರೈತರ, ಸಣ್ಣ ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಿಲ್ಲ. ರೈತರ ಸಾಲ ಮನ್ನಾ ಮಾಡುವುದು ಕೆಟ್ಟ ಸಂಪ್ರದಾಯವೆಂಬ ಭಾವನೆಯಿದೆ. ಬೆರಳಣಿಕೆಯಷ್ಟು ಉದ್ಯಮಿಗಳ ಸಾಲ ಮನ್ನಾ ಮಾಡುವುದು ಎಷ್ಟು ಸರಿ’ ಎಂದು ರಾಹುಲ್ ಪ್ರಶ್ನಿಸಿದರು.

ಸಣ್ಣ ಉದ್ಯಮಿಗಳಿಗೆ ಬ್ಯಾಂಕ್ ಸಾಲ ಸುಲಭವಾಗಿ ಸಿಗಬೇಕು ಎಂದು ಗಾರ್ಮೆಂಟ್ ನೌಕರರು ರಾಹುಲ್‌ಗೆ ಬೇಡಿಕೆ ಇಟ್ಟರು. ನಾವು ₹6–₹8 ಸಾವಿರಕ್ಕೆ ಕೆಲಸ ಮಾಡುತ್ತೇವೆ. ₹2 ಸಾವಿರ ಬಸ್‌ಪಾಸ್‌ಗೆ ವೆಚ್ಚವಾಗುತ್ತದೆ. ಜೀವನ ನಡೆಸಲು ಕಷ್ಟವಾಗುತ್ತಿದೆ. ನಮಗೆ ಉಚಿತ ಬಸ್‌ಪಾಸ್ ನೀಡಬೇಕು. ಆರ್‌ಟಿಇ ಅಡಿ ಮಕ್ಕಳಿಗೆ ಸೀಟು ಸಿಗುತ್ತಿಲ್ಲ. ಆರ್‌ಟಿಇ ಅಡಿ ಸೀಟು ಹೆಚ್ಚಳ ಮಾಡಬೇಕು. ಲಕ್ಷದವರೆಗೆ ಡೊನೇಶನ್ ಕೊಡಲು ನಮಗೆ ಸಾಧ್ಯವಿಲ್ಲ ಎಂದೂ ಅಹವಾಲು ತೋಡಿಕೊಂಡರು.

ಸಮಸ್ಯೆ ಈಡೇರಿಸಲು ಪ್ರಯತ್ನಿಸುವುದಾಗಿ ರಾಹುಲ್ ಭರವಸೆ ನೀಡಿದರು.

ಗಾಂಧಿನಗರದ ಕಾಟನ್ ಪೇಟೆಯ ಮಸ್ತಾನ್ ಷಾ ದರ್ಗಾಕ್ಕೆ ರಾಹುಲ್ ಭೇಟಿ ನೀಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆಗಿದ್ದರು. ರಾಹುಲ್ ಅವರನ್ನು ನೋಡಲು ಜನ ಮುಗಿಬಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry