ಅಮೆರಿಕದ ‘ವಾಲ್‌ಮಾರ್ಟ್‌’ ತೆಕ್ಕೆಗೆ ಬೆಂಗಳೂರಿನ ‘ಫ್ಲಿಪ್‌ಕಾರ್ಟ್‌’

7
ಶೇ 77 ಷೇರು ಖರೀದಿಗೆ ₹1.07 ಲಕ್ಷ ಕೋಟಿ

ಅಮೆರಿಕದ ‘ವಾಲ್‌ಮಾರ್ಟ್‌’ ತೆಕ್ಕೆಗೆ ಬೆಂಗಳೂರಿನ ‘ಫ್ಲಿಪ್‌ಕಾರ್ಟ್‌’

Published:
Updated:
ಅಮೆರಿಕದ ‘ವಾಲ್‌ಮಾರ್ಟ್‌’ ತೆಕ್ಕೆಗೆ ಬೆಂಗಳೂರಿನ ‘ಫ್ಲಿಪ್‌ಕಾರ್ಟ್‌’

ನವದೆಹಲಿ: ದೇಶದ ಅತಿದೊಡ್ಡ ಇ–ಕಾಮರ್ಸ್‌ ಸಂಸ್ಥೆ ಬೆಂಗಳೂರಿನ ಫ್ಲಿಪ್‌ಕಾರ್ಟ್‌ನ ಶೇ 77 ಪಾಲು ಬಂಡವಾಳವನ್ನು ₹1.07 ಲಕ್ಷ ಕೋಟಿ(16 ಬಿಲಿಯನ್‌ ಡಾಲರ್‌) ನೀಡಿ ಖರೀದಿಸಲು ಅಮೆರಿಕದ ರಿಟೇಲ್‌ ದೈತ್ಯ ಸಂಸ್ಥೆ ವಾಲ್‌ಮಾರ್ಟ್‌ ಒಪ್ಪಿದೆ.

ಫ್ಲಿಪ್‌ಕಾರ್ಟ್‌ ಪಾಲು ಸ್ವಾಧೀನ ಪ್ರಕ್ರಿಯೆ ಸಂಬಂಧ ಮಂಗಳವಾರ ರಾತ್ರಿ ಒಪ್ಪಂದ ಆಗಿರುವುದಾಗಿ ಸಾಫ್ಟ್‌ಬ್ಯಾಂಕ್ ಸಿಇಒ ಮಸಯೋಶಿ ಸನ್‌ ಹೇಳಿದ್ದಾರೆ.

ಉಳಿದ ಶೇ 23 ಪಾಲುದಾರಿಕೆಯನ್ನು ಫ್ಲಿಪ್‌ಕಾರ್ಟ್‌ನ ಷೇರುದಾರರು, ಸಂಸ್ಥೆಯ ಸಹ–ಸಂಸ್ಥಾಪಕ ಬಿನ್ನಿ ಬನ್ಸಲ್‌, ಚೀನಾದ ಟೆನ್‌ಸೆಂಟ್‌, ಟೈಗರ್‌ ಗ್ಲೋಬಲ್‌ ಮ್ಯಾನೇಜ್‌ಮೆಂಟ್‌ ಹಾಗೂ ಮೈಕ್ರೊಸಾಫ್ಟ್ ಕಾರ್ಪೊರೇಷನ್‌ ಹೊಂದಿರಲಿವೆ.

ವಾಲ್‌ಮಾರ್ಟ್‌ ಇಂಡಿಯಾದ ಅಧ್ಯಕ್ಷ ಕ್ರಿಷ್‌ ಐಯ್ಯರ್‌ ಸಂಸ್ಥೆಯ ವಾಣಿಜ್ಯ ಚಟುವಟಿಕೆಯ ಜವಾಬ್ದಾರಿ ವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry