ಮೊಬೈಲ್‌ ಸಂಖ್ಯೆ ನೀಡದ್ದಕ್ಕೆ ಬಾಲಕಿಗೆ ಬೆಂಕಿ

7

ಮೊಬೈಲ್‌ ಸಂಖ್ಯೆ ನೀಡದ್ದಕ್ಕೆ ಬಾಲಕಿಗೆ ಬೆಂಕಿ

Published:
Updated:
ಮೊಬೈಲ್‌ ಸಂಖ್ಯೆ ನೀಡದ್ದಕ್ಕೆ ಬಾಲಕಿಗೆ ಬೆಂಕಿ

ವಾರಾಣಸಿ: ಪದೇ ಪದೇ ಕೇಳಿದರೂ ಮೊಬೈಲ್‌ ನಂಬರ್‌ ನೀಡಲಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ದಲಿತ ಬಾಲಕಿಗೆ ಬೆಂಕಿ ಹಚ್ಚಿರುವ ಪ್ರಕರಣ ಅಜಂಗಡ ಜಿಲ್ಲೆಯ ಫರಿಹಾ ಗ್ರಾಮದಲ್ಲಿ ನಡೆದಿದೆ.

ಇದೇ ಗ್ರಾಮದ ಮೊಹಮ್ಮದ್‌ ಶಾಯಿ ಎನ್ನುವ ವ್ಯಕ್ತಿ ಮೊಬೈಲ್‌ ನಂಬರ್‌ಗಾಗಿ ಬಾಲಕಿಯನ್ನು ಹಲವು ದಿನಗಳಿಂದ ಪೀಡಿಸುತ್ತಿದ್ದ. ಮಂಗಳವಾರ ಬಾಲಕಿಯ ಮನೆಗೆ ತೆರಳಿ ಮತ್ತೆ ಕೇಳಿದ್ದ. ಆಗ ನಿರಾಕರಿಸಿದಾಗ ಬಾಲಕಿ ಮೇಲೆ ಹಲ್ಲೆ ನಡೆಸಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಗ್ರಾಮಸ್ಥರು ಬೆಂಕಿಯನ್ನು ನಂದಿಸಿದ್ದಾರೆ. ಪರಾರಿಯಾಗಲು ಯತ್ನಿಸುತ್ತಿದ್ದ ಶಾಯಿಯನ್ನು ಗ್ರಾಮಸ್ಥರೇ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಾಲಕಿ ಶೇಕಡ 80ರಷ್ಟು ಗಾಯಗೊಂಡಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry