‘ಇಂಥ ಬ್ಯಾಟಿಂಗ್ ನಾನು ನೋಡಲೇ ಇಲ್ಲ’

ಮುಂಬೈ: ಸನ್‌ರೈಸರ್ಸ್ ಹೈದರಾಬಾದ್ ಎದುರು ಸ್ಫೋಟಕ ಶತಕ ಸಿಡಿಸಿದ ರಿಷಭ್ ಪಂತ್ ಅವರನ್ನು ಮನಸಾರೆ ಕೊಂಡಾಡಿರುವ ಹಿರಿಯ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕಾರ್ ‘ಇಂಥ ಬ್ಯಾಟಿಂಗ್ ನಾನು ಜೀವನದಲ್ಲಿ ಎಂದೂ ನೋಡಲಿಲ್ಲ’ ಎಂದಿದ್ದಾರೆ.
ಪಂದ್ಯದಲ್ಲಿ ಅಪೂರ್ವ ಬ್ಯಾಟಿಂಗ್ ಮಾಡಿದ ಪಂತ್ ವೇಗಿ ಭುವನೇಶ್ವರ್ ಕುಮಾರ್ ಹಾಕಿದ ಕೊನೆಯ ಓವರ್‌ನಲ್ಲಿ ಚೆಂಡನ್ನು ಸ್ಕೂಪ್ ಮಾಡಿ ಥರ್ಡ್‌ಮ್ಯಾನ್ ಮೇಲಿಂದ ಸಿಕ್ಸರ್‌ಗೆ ಎತ್ತಿದ್ದರು. ‘ಗುರುವಾರ ಪಂತ್ ಆಡಿದ ರೀತಿ ಅದ್ಭುತವಾಗಿತ್ತು. ಅವರೇ ರೂಢಿಸಿಕೊಂಡ ವಿಶಿಷ್ಟ ಹೊಡೆತಗಳು ಈ ಇನಿಂಗ್ಸ್‌ನಲ್ಲಿ ಇದ್ದವು’ ಎಂದು ರಾಷ್ಟ್ರೀಯ ಶಾಲಾ ಕ್ರಿಕೆಟ್ ಲೀಗ್‌ನಲ್ಲಿ ಪಾಲ್ಗೊಂಡ ಅವರು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.