ನವದೆಹಲಿ: ಭಾರತ ತಂಡದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಬೆಂಬಲಿಸಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ‘ಮುಂದುವರಿಯಬೇಕೇ ಬೇಡವೇ ಎಂದು ಈ ಆಟಗಾರರಿಗೆ ಯಾರೂ ಹೇಳಬಾರದು’ ಎಂದಿದ್ದಾರೆ.

ಇದೇ 7 ರಂದು ತವರಿನಲ್ಲಿ ಆರಂಭವಾಗುವ ಟಿ20 ವಿಶ್ವಕಪ್ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಯತ್ನದಲ್ಲಿರುವ ಭಾರತ ‘ಅತಿ ಪ್ರಬಲ ತಂಡ’ ಎಂದೂ ದಿಗ್ಗಜ ವಿಕೆಟ್ ಕೀಪರ್–ಬ್ಯಾಟರ್ ಹೇಳಿದ್ದಾರೆ.

ಟೈಲ್ಸ್ ಉದ್ಯಮವಾದ ಎಂವೈಕೆ ಲ್ಯಾಟಿಕ್ರೀಟ್ಗೆ ಪ್ರಚಾರ ರಾಯಭಾರಿಯಾಗಿರುವ ಅವರು ಕ್ರೀಡಾ ಬ್ರಾಡ್ಕಾಸ್ಟರ್ ಜತಿನ್ ಸಪ್ರು ಜೊತೆ ಸಂದರ್ಶನದಲ್ಲಿ ಮಾತನಾಡಿದರು.

ದಿಗ್ಗಜರಾದ ರೋಹಿತ್ ಮತ್ತು ಕೊಹ್ಲಿ ಅವರು 2027ರ ವಿಶ್ವಕಪ್ ಆಡುವ ಬಗ್ಗೆ ಕೇಳಿದ ಪ್ರಶ್ನೆಗೆ ‘ಅವರು ಯಾಕೆ ವಿಶ್ವಕಪ್ ಆಡಬಾರದು?’ ಎಂದು ಮರುಪ್ರಶ್ನೆ ಹಾಕಿದರು. ‘ನನ್ನ ಪ್ರಕಾರ ವಯಸ್ಸು ಮಾನದಂಡವಾಗಬಾರದು. ಅವರ ಆಟದ ಮಟ್ಟ, ಫಿಟ್ನೆಸ್ ಅಳತೆಗೋಲಾಗಬೇಕು’ ಎಂದು ಹೇಳಿದರು.

‘ನಾನು 24ನೇ ವಯಸ್ಸಿಗೆ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದಾಗ, ನನಗೆ ಯಾರೂ ಏನನ್ನೂ ಹೇಳಲಿಲ್ಲ. ಆದರೆ ದೇಶಕ್ಕೆ 10, 20 ವರ್ಷಗಳ ಕಾಲ ಆಡಿದ ನಂತರ ಯಾರೂ ಬಂದು ನನ್ನ ವಯಸ್ಸಿನ ಬಗ್ಗೆ ಹೇಳುವ ಅಗತ್ಯವಿರುವುದಿಲ್ಲ’ ಎಂದು ಅವರು ಹೇಳಿದರು. 44 ವರ್ಷ ವಯಸ್ಸಿನ ಧೋನಿ ಈಗಲೂ ಐಪಿಎಲ್ನಲ್ಲಿ ಆಡುತ್ತಿದ್ದಾರೆ.

‘ರೋಹಿತ್ ಆಗಲಿ, ವಿರಾಟ್ ಆಗಲಿ, ಅಥವಾ ಮುಂದಿನ ಐದು ವರ್ಷಗಳಲ್ಲಿ ವಿಶ್ವಕಪ್ ಆಡುವ ಇನ್ನಾರೊ ಹಿರಿಯ ಆಟಗಾರನಾಗಲಿ ಮುಂದಿನ ವಿಶ್ವಕಪ್ನಲ್ಲಿ ಆಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸಬೇಕಾಗಿರುವುದು ನಾವಲ್ಲ. ಅವರೇ ನಿರ್ಧರಿಸಬೇಕು. ಚೆನ್ನಾಗಿ ಆಡುತ್ತಿದ್ದರೆ, ದೇಶಕ್ಕೆ ಇನ್ನೂ ಆಡಬೇಕೆಂಬ ತುಡಿತವಿದ್ದರೆ ಯಾಕೆ ಆಡಬಾರದು’ ಎಂದು ಧೋನಿ ಪ್ರಶ್ನಿಸಿದರು.

‘ಅನುಭವಿ ಆಟಗಾರರನ್ನು ಪಡೆಯಲು ಸಾಧ್ಯವಿಲ್ಲ. 20 ವರ್ಷದ ಅನುಭವಿ ಆಟಗಾರ ಸಿಗಲು ಸಾಧ್ಯವಿಲ್ಲ– ತೆಂಡೂಲ್ಕರ್ ಅಂಥವರನ್ನು ಹೊರತುಪಡಿಸಿ! 16–17ನೇ ವಯಸ್ಸಿನಲ್ಲಿ ಆಡತೊಡಗಿದರಷ್ಟೇ ವಯಸ್ಸಿನ ಜೊತೆಗೆ ಅನುಭವ ಪಡೆಯಲು ಸಾಧ್ಯ’ ಎಂದರು.

‘ದೀರ್ಘ ಕಾಲ ಆಡುವುದರ ಜೊತೆಗೆ ಒತ್ತಡ ನಿಭಾಯಿಸುವ ಛಾತಿ ಹೊಂದಿದಲ್ಲಿ ಮಾತ್ರ ಅಂಥ ಆಟಗಾರನ್ನು ಅನುಭವಿ ಎಂದು ಪರಿಗಣಿಸಬಹುದು’ ಎಂದರು.

ರೋಹಿತ್ ಮತ್ತು ವಿರಾಟ್ ಅವರು 2027ರ ವಿಶ್ವಕಪ್ನಲ್ಲಿ ಆಡುತ್ತಾರೆಯೇ ಎಂಬ ಬಗ್ಗೆ ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭಿರ್ ಖಚಿತಪಡಿಸಿಲ್ಲ. ಇವರಿಬ್ಬರು ಈಗ ಏಕದಿನ ಮಾದರಿಗೆ ಮಾತ್ರ ಸೀಮಿತಗೊಂಡಿದ್ದಾರೆ.

ಅತಿ ಪ್ರಬಲ ತಂಡ: ಚರ್ಚೆಯು ನಂತರ ಟಿ20ವಿಶ್ವಕಪ್ನತ್ತ ಹೊರಳಿತು. ‘ಭಾರತ ತಂಡ ಅತಿಪ್ರಬಲವಾಗಿದೆ. ಆದರೆ ವರ್ಷದ ಈ ಸಮಯದಲ್ಲಿ ಬೀಳುವ ಇಬ್ಬನಿಯ ಬಗ್ಗೆಯೂ ಗಮನಹೊಂದಿರಬೇಕು’ ಎಂದು ಧೋನಿ ಸಲಹೆ ನೀಡಿದರು. ಭಾರತ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಾಗ ಧೋನಿ ನಾಯಕರಾಗಿದ್ದರು.

‘ಇದು ಟೂರ್ನಿಯ ಅತ್ಯಂತ ಪ್ರಬಲ ತಂಡಗಳಲ್ಲಿ ಒಂದು. ಉತ್ತಮ ತಂಡಕ್ಕೆ ಏನು ಬೇಕೊ ಅವನ್ನೆಲ್ಲಾ ಈ ತಂಡ ಹೊಂದಿದೆ. ತಂಡ, ವಿಶೇಷವಾಗಿ ಈ ಮಾದರಿಯಲ್ಲಿ ಸಾಕಷ್ಟು ಅನುಭವ ಹೊಂದಿದೆ’ ಎಂದು ಹೇಳಿದರು.

‘ಅವರು ಒತ್ತಡದಲ್ಲಿ ಆಡಿದ್ದಾರೆ. ಆದರೆ ಚಿಂತೆಯ ವಿಷಯವೆಂದರೆ ಇಬ್ಬನಿ. ನಾನು ಅದನ್ನು ದ್ವೇಷಿಸುವೆ. ಇದು ಸಾಕಷ್ಟು ಬದಲಾವಣೆಗೆ ಕಾರಣವಾಗುತ್ತದೆ. ನಾನು ಆಡುತ್ತಿದ್ದಾಗಲೂ ನನಗೆ ಅದರದ್ದೇ ಚಿಂತೆ ಇರುತಿತ್ತು. ಅಂಥ ವೇಳೆ ಟಾಸ್ ನಿರ್ಣಾಯಕವಾಗುತ್ತದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.