ಕಿಂಗ್ಡಾವೊ (ಚೀನಾ): ಭಾರತ ಮಹಿಳೆಯರ ಹಾಗೂ ಪುರುಷರ ತಂಡಗಳು ಇಲ್ಲಿ ನಡೆಯುತ್ತಿರುವ ಏಷ್ಯಾ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಬುಧವಾರ ಶುಭಾರಂಭ ಮಾಡಿದವು. ಹಾಲಿ ಚಾಂಪಿಯನ್ ಮಹಿಳೆಯರ ತಂಡವು 5–0ಯಿಂದ ಮ್ಯಾನ್ಯಾರ್ ತಂಡವನ್ನು ಸುಲಭವಾಗಿ ಮಣಿಸಿತು. ಪುರುಷರ ತಂಡವು 3–2ರಿಂದ ಸಿಂಗಾಪುರ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು.

ವೈ ಗುಂಪಿನಲ್ಲಿರುವ ಭಾರತ ತಂಡದ ತನ್ವಿ ಶರ್ಮಾ ಸಿಂಗಲ್ಸ್ನಲ್ಲಿ 21–13, 21–16ರಿಂದ ಮ್ಯಾನ್ಮಾರ್ನ ಥೆಟ್ ತಾರ್ ತೂಝರ್ ವಿರುದ್ಧ ಗೆದ್ದರು. ಇನ್ನೊಂದು ಪಂದ್ಯದಲ್ಲಿ ರಕ್ಷಿತಾ ರಾಮರಾಜ್ ಅವರು 21–12, 21–6ರಿಂದ ಏಂಟ್ ಚಿಟ್ ಫೂ ಅವರನ್ನು ಮಣಿಸಿ, ಮುನ್ನಡೆಯನ್ನು 2–0ಗೆ ಹಿಗ್ಗಿಸಿದರು. ಸಿಂಗಲ್ಸ್ನ ಮೂರನೇ ಪಂದ್ಯದಲ್ಲಿ ಮಾಳವಿಕಾ ಬನ್ಸೋಡ್ ಅವರು 21–19, 21–12ರಿಂದ ಲಿನ್ ಟೆಟ್ ಅವರನ್ನು ಹಿಮ್ಮೆಟ್ಟಿಸಿದರು.

ಭಾರತ ತಂಡವು ಡಬಲ್ಸ್ನಲ್ಲಿಯೂ ಪಾರಮ್ಯ ಮುಂದುವರಿಸಿತು. ಪ್ರಿಯಾ ಕಾನ್ಜೆಂಗ್ಬಾಮ್ ಹಾಗೂ ಶ್ರುತಿ ಮಿಶ್ರಾ ಅವರು 21–15, 21–16ರಿಂದ ಸು ಲಾಟ್– ಥೆಟ್ ತಾರ್ ಜೋಡಿಯನ್ನು ಸೋಲಿಸಿದರು. ಇನ್ನೊಂದು ಪಂದ್ಯದಲ್ಲಿ ಟ್ರೀಸಾ ಜೋಳಿ– ಗಾಯತ್ರಿ ಗೋಪಿಚಂದ್ ಜೋಡಿ 21–8, 21–6ರಿಂದ ಲಿನ್ ಟೆಟ್ ಹಾಗೂ ಚಿಟ್ ಫೂ ಅವರ ವಿರುದ್ಧ ನಿರಾಯಾಸವಾಗಿ ಗೆಲುವು ಸಾಧಿಸಿತು.

ಭಾರತ ಮಹಿಳಾ ತಂಡವು ಅನುಭವಿ ಪಿ.ವಿ. ಸಿಂಧು ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದು, ಗುರುವಾರ ನಡೆಯಲಿರುವ ಗುಂಪು ಹಂತದ ಎರಡನೇ ಪಂದ್ಯದಲ್ಲಿ ಹಾಲಿ ರನ್ನರ್ಅಪ್ ಥಾಯ್ಲೆಂಡ್ ಎದುರು ಸೆಣಸಲಿದೆ.

ಪುರುಷರ ತಂಡ ಶುಭಾರಂಭ: ಅನುಭವಿ ಸಿಂಗಲ್ಸ್ ಆಟಗಾರ ಲಕ್ಷ್ಯ ಸೇನ್ ಅವರು ಸಿಂಗಪುರ ವಿರುದ್ಧದ ಗುಂಪು ಹಂತದ ಮೊದಲ ಪಂದ್ಯದಲ್ಲಿ 16–21, 21–19, 16–21ರಿಂದ ಕೀನ್ ಯೂ ವಿರುದ್ಧ ಪರಾಭವಗೊಂಡರು. ವಿಶ್ವದ ಮಾಜಿ ಅಗ್ರಮಾನ್ಯ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿಯು 21–10, 21–8ರಿಂದ ನೇರ ಆಟಗಳಲ್ಲಿ ಕೀಟ್ ವೆಸ್ಲೆ ಕೊ ಹಾಗೂ ಜುನ್ಸೂಕ್ ಕುಬೊ ಅವರನ್ನು ಮಣಿಸಿದರು.

ಸಿಂಗಲ್ಸ್ನ ಎರಡನೇ ಪಂದ್ಯದಲ್ಲಿ ಕನ್ನಡಿಗ ಆಯುಷ್ ಶೆಟ್ಟಿ 21–17, 21–15ರಿಂದ ಜಿಯಾ ಹೆಂಗ್ ಜೇಸನ್ ತೇ ಎದುರು ಗೆದ್ದು, ಭಾರತಕ್ಕೆ 2–1 ಮುನ್ನಡೆ ತಂದುಕೊಟ್ಟರು. ಡಬಲ್ಸ್ನ ಎರಡನೇ ಪಂದ್ಯದಲ್ಲಿ ಪೃಥ್ವಿ ಕೃಷ್ಣಮೂರ್ತಿ ರಾಯ್– ಸಾಯಿ ಪ್ರತೀಕ್ ಜೋಡಿ 21–8, 21–23, 20–22ರಲ್ಲಿ ಜೋ ಜೀ ಹಾಗೂ ಡೊನವಾನ್ ವಿಲ್ಲರ್ಡ್ ವೀ ಎದುರು ಮಣಿದರು.

ನಿರ್ಣಾಯಕವಾಗಿದ್ದ ಸಿಂಗಲ್ಸ್ನ ಮೂರನೇ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್ 21–15, 21–16ರಿಂದ ಜಿಯಾ ವೀ ಜೋಯಲ್ ಕೊ ಅವರನ್ನು ಸೋಲಿಸಿದರು.

ಭಾರತ ಪುರುಷರ ತಂಡವು ಗುರುವಾರ ಜಪಾನ್ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.