ಶನಿವಾರ, ಫೆಬ್ರವರಿ 27, 2021
27 °C

'ಬಾಲಗಂಗಾಧರ ತಿಲಕ್ ಭಯೋತ್ಪಾದನೆಯ ಪಿತಾಮಹ'-ರಾಜಸ್ತಾನದ 8ನೇ ತರಗತಿ ಪುಸ್ತಕದಲ್ಲಿ ಪ್ರಕಟ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

'ಬಾಲಗಂಗಾಧರ ತಿಲಕ್ ಭಯೋತ್ಪಾದನೆಯ ಪಿತಾಮಹ'-ರಾಜಸ್ತಾನದ 8ನೇ ತರಗತಿ ಪುಸ್ತಕದಲ್ಲಿ ಪ್ರಕಟ

ಅಜ್ಮೇರ್(ರಾಜಸ್ತಾನ): ರಾಜಸ್ತಾನದ ಆಂಗ್ಲ ಮಾಧ್ಯಮದ ಎಂಟನೇ ತರಗತಿ ಪುಸ್ತಕದಲ್ಲಿ ‘ಲೋಕಮಾನ್ಯ ಬಾಲಗಂಗಾಧರ ತಿಲಕ್ ಭಯೋತ್ಪಾದನೆಯ ಪಿತಾಮಹ’ ಎಂಬ ವಿವಾದಾತ್ಮಕ ವಾಕ್ಯ ಮುದ್ರಣಗೊಂಡಿದೆ. 

8ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿನ 18ನೇಮತ್ತು 19ನೇ ಶತಮಾನದ ರಾಷ್ಟ್ರೀಯ ಚಳುವಳಿಯ ಘಟನೆಗಳು ಎಂಬ 22ನೇ ಅಧ್ಯಾಯದಲ್ಲಿ ಮುದ್ರಣವಾಗಿದೆ.

ಮಥುರಾ ಪ್ರಕಾಶನ ಪಠ್ಯಪುಸ್ತಕ ಪ್ರಕಟಿಸಿದ್ದು, ರಾಷ್ಟ್ರೀಯ ಚಳುವಳಿಯನ್ನು ಮುನ್ನಡೆಸುತ್ತಿದ್ದ ತಿಲಕ್ ಅವರನ್ನು ಭಯೋತ್ಪಾದನೆಯ ಪಿತಾಮಹ ಎಂದು ಕರೆಯಲಾಗುತ್ತದೆ ಎಂಬ ವಾಕ್ಯ ಪುಸ್ತಕದ 267ನೇ ಪುಟದಲ್ಲಿದೆ.

ತಿಲಕ್ ಅವರನ್ನು ಭಯೋತ್ಪಾದನೆಯ ಪಿತಾಮಹ ಎಂದು ಕರೆದಿರುವುದು ಖಂಡನೀಯ. ಈ ವಿವಾದಾತ್ಮಕ ವಾಕ್ಯವನ್ನು ಸರಿಪಡಿಸುವ ಮುನ್ನ ಇತಿಹಾಸಕಾರರನ್ನು ಸಂಪರ್ಕಿಸುತ್ತೇವೆ ಎಂದು ನಿರ್ದೇಶಕ ಕೈಲಾಶ್ ಶರ್ಮ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ರಾಜಸ್ತಾನದ ಮುಖ್ಯಮಂತ್ರಿಗಳೇ, ಪಠ್ಯಪುಸ್ತಕದಲ್ಲಿನ ತಪ್ಪನ್ನು ಸರಿ ಮಾಡುತ್ತಿರೋ ಅಥವಾ ತಪ್ಪಿತಸ್ಥರನ್ನು ಶಿಕ್ಷಸುತ್ತೀರೋ? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.