ಕಾನ್ ಸಿನಿಮೋತ್ಸವ ಸಿನಿಮಾಗಳಿಗಷ್ಟೇ ಅಲ್ಲ, ಅಲ್ಲಿಯ ಕೆಂಪು ರತ್ನಗಂಬಳಿಯ ಮೇಲೆ ಹೆಜ್ಜೆ ಹಾಕುವ ಬೆಡಗಿಯರಿಗಾಗಿ ಕಾಯುವ ಉತ್ಸವವೂ ಹೌದು. ಅತಿ ಪ್ರತಿಷ್ಠಿತ ನಡಿಗೆ ಈ ಕೆಂಪುಹಾಸಿನ ಮೇಲಿನದು. ಐಶ್ವರ್ಯ ರೈ 18 ವರ್ಷಗಳಿಂದ ಹೆಜ್ಜೆ ಹಾಕುತ್ತಿದ್ದರೆ, ದೀಪಿಕಾ ಪಡಕೋಣೆಗೆ ಇದು ಎರಡನೆಯ ಕಾನ್ಸ್. ಮಲ್ಲಿಕಾ ಶೆರಾವತ್ ಸಹ ಈ ಕೆಂಪು ಹಾಸಿನ ಮೇಲೆ ನಡು ಬಳುಕಿಸಿದವರೇ.

ನೀಳಕಾಯದ ಸುಂದರಿಯರು ಅವರಷ್ಟೇ ತೂಕದ ವಸ್ತ್ರವೈಭವ ಹೊತ್ತು ಹೆಜ್ಜೆಹಾಕುವುದರಿಂದಲೇ ಕಾನ್ಸ್‌ನಡಿಗೆ ಕಣ್ಸೆಳೆಯುತ್ತದೆ. ಪಾರದರ್ಶಕವಷ್ಟೇ ಅಲ್ಲ, ಅಪಾರದರ್ಶಕ ವಸ್ತ್ರವೈವಿಧ್ಯಕ್ಕೆ ವಿದೇಶಿ ವಿನ್ಯಾಸಗರೇ ಸೂಜಿದಾರ ಹಿಡಿದಿರುತ್ತಾರೆ. ಈ ವರ್ಷ ಐಶ್ವರ್ಯ ರೈ ಮತ್ಸ್ಯಕನ್ಯಯಂತೆ ಕಣ್ಮನಸೆಳೆದರೆ, ದೀಪಿಕಾ ಕಡುಗುಲಾಬಿ ಬಣ್ಣದ ಗೌನು ತೊಟ್ಟು ಕೀಟಪ್ರಪಂಚದ ಪ್ರತಿನಿಧಿಯೆನಿಸಿದರು.

ಐಶ್ವರ್ಯ ರೈ ತಮ್ಮ ಉಡುಗೆ ಬಣ್ಣದಂತೆಯೇ ಐ ಶ್ಯಾಡೋಗಳನ್ನು ಬಳಸಿ, ಕಂಗಳ ಮೇಕಪ್‌ಗೆ ಹೆಚ್ಚಿನ ಒತ್ತು ನೀಡಿ, ಕಣ್ಣರಳಿಸಿದರು. ಹೆಚ್ಚಾಗಿ ಕಣ್ಣು ಮತ್ತು ತುಟಿ ಒಟ್ಟೊಟ್ಟಿಗೆ ಗಾಢ ಮೇಕಪ್ ಇದ್ದರೆ ಹಿತವೆನಿಸದು. ಆದರೆ ನಿರಾಭರಣವಾಗಿರುವುದರಿಂದ ಇಲ್ಲಿ ಐಶ್ ಮತ್ಸ್ಯಕನ್ಯೆಯಂತೆಯೇ ಮಿಂಚುತ್ತಿದ್ದಾರೆ.

ಬರಿಗೊರಳಿನಲ್ಲಿ ಬಂದಿರುವ ದೀಪಿಕಾ ಸಹ ಕಡುಕೆಂಪು ಬಣ್ಣದ ತುಟಿರಂಗು, ಕಡುಕಪ್ಪು ಕಾಡಿಗೆಯ ಅಂಚಿನಿಂದ ಇಣುಕುವ ಕಣ್ಬೆಳಕು, ನಗೆಮಿಂಚು, ದಟ್ಟ ಕಾರ್ಮೋಡದಂಥ ಕೇಶವಿನ್ಯಾಸದಿಂದ ಅವರೂ ಕ್ಯಾಮೆರಾಗಳನ್ನು ಸೆಳೆದರು. ರೆಡ್ ಕಾರ್ಪೆಟ್ ಮೇಲಿನ ಈ ಮಾರ್ಜಾಲ ನಡಿಗೆಯಲ್ಲಿ ಕ್ಯಾಮೆರಾ ಕ್ಲಿಕ್‌ಗಳ ಸುರಿಮಳೆ, ಫ್ಲ್ಯಾಷ್‌ಗಳ ಮಿಂಚಿನಲ್ಲಿ ಮಿಂದೆದ್ದರು ಈ ಇಬ್ಬರೂ ಕನ್ನಡತಿಯರು.

ಕಡುಗಾಢ ಬಣ್ಣದ ಮೇಕಪ್‌ನಿಂದ ಕಂಗೊಳಿಸಿದ್ದು ಲೊರಿಯಲ್ ಸೌಂದರ್ಯ ಪ್ರಸಾಧನಗಳ ಪ್ರತಿನಿಧಿಯಾಗಿರುವುದರಿಂದ ಎಂದು ಬೇರೆ ಹೇಳಬೇಕಾಗಿಲ್ಲ ತಾನೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.