ಶನಿವಾರ, ಮಾರ್ಚ್ 6, 2021
20 °C

ರಾಹುಲ್ ಗಾಂಧಿಯವರ ಮೇಲಿನ ದಾಳಿ ತಡೆಯಲು ಕಾಂಗ್ರೆಸ್ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಹುಲ್ ಗಾಂಧಿಯವರ ಮೇಲಿನ ದಾಳಿ ತಡೆಯಲು ಕಾಂಗ್ರೆಸ್ ಕಾರ್ಯಾಚರಣೆ

ಬೆಂಗಳೂರು: ನೇತೃತ್ವ ಸ್ಥಾನಕ್ಕೆ ಬಂದ ಮೇಲೆ ಸತತವಾಗಿ ಸೋಲುಗಳನ್ನು ಎದುರಿಸುತ್ತಿರುವ ರಾಹುಲ್ ಗಾಂಧಿಯವರ ಮೇಲಿನ ದಾಳಿ ತಡೆಯಲು ಕಾಂಗ್ರೆಸ್ ಕಾರ್ಯಾಚರಣೆ ಆರಂಭಿಸಿದೆ.

ಕರ್ನಾಟಕದಲ್ಲಿ ರಾಹುಲ್ ಗಾಂಧಿ 38 ರ್‍ಯಾಲಿಗಳನ್ನು ನಡೆಸುವ ಮೂಲಕ ಪ್ರಚಾರ ಮಾಡಿದ್ದರು. ಆದರೆ ಕಾಂಗ್ರೆಸ್ ಹಿರಿಯ ನಾಯಕರು ಸೋಲಿನ ಹೊಣೆಯನ್ನು ಸಿದ್ದರಾಮಯ್ಯ ಅವರ ತಲೆಗೆ ಹೊರಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ದಿಲ್ಲಿಯ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಸಿದ್ದರಾಮಯ್ಯ ಅವರ 'ಉದ್ಧಟತನ' ಸೋಲಿಗೆ ಕಾರಣವೆಂದಿದ್ದಾರೆ.

ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗರಾದ ಲಿಂಗಾಯತರನ್ನು ಒಲಿಸಿಕೊಳ್ಳುವುದಕ್ಕೆ ಸಿದ್ದರಾಯಮ್ಯ ಹೂಡಿದ ತಂತ್ರ ಫಲಿಸಿಲ್ಲ. ಜೆಡಿಎಸ್‌ನ ಸಾಂಪ್ರದಾಯಿಕ ಬೆಂಬಲಿಗರಾದ ಒಕ್ಕಲಿಗರೂ ಅನೇಕ ಕಡೆಗಳಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿಯ ಕೈಹಿಡಿದ್ದಾರೆ. ಹಾಸನದಂಥ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿರುವುದೇ ಇದಕ್ಕೆ ಸಾಕ್ಷಿ.

ಎನ್‌ಡಿಟಿವಿಯ ಜೊತೆ ಮಾತನಾಡಿರುವ ಡಿ.ಕೆ.ಶಿವಕುಮಾರ್ 'ರಾಹುಲ್ ಗಾಂಧಿ ಸಾಕಷ್ಟು ಪ್ರಯತ್ನಪಟ್ಟರು. ಸ್ಥಳೀಯ ನಾಯಕತ್ವ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕಾಗಿತ್ತು. ಅದರಲ್ಲಿ ನಾವು ಸೋತೆವು' ಎಂದಿದ್ದಾರೆ.

'ಪಕ್ಷ ಈ ಮಟ್ಟದ ಸೋಲನ್ನು ನಿರೀಕ್ಷಿಸಿರಲಿಲ್ಲ. ಸ್ಥಳೀಯ ನಾಯಕರ ಮಟ್ಟಿಗೆ ಇದೊಂದು ಒಳ್ಳೆಯ ಬೆಳವಣಿಗೆಯಲ್ಲ' ಸಿದ್ದರಾಮಯ್ಯನವರಿಗೆ ಪರೋಕ್ಷವಾಗಿ ತಿವಿದಿದ್ದಾರೆ.

ಮೋದಿ ಅಲೆ ಇದ್ದುದರಿಂದ ಬಿಜೆಪಿಗೆ ಗೆಲುವಾಗಿದೆ ಎಂಬುದನ್ನು ಅವರು ಒಪ್ಪಿಲ್ಲ. ಬದಲಿಗೆ 'ಇದು ನಮ್ಮದೇ ಸೋಲು. ನಾವು ಕ್ಷೇತ್ರ ಮಟ್ಟದಲ್ಲಿ ಇನ್ನೂ ಹೆಚ್ಚು ಎಚ್ಚರದಿಂದ ಇರಬೇಕಾಗಿತ್ತು ಎಂದಿದ್ದಾರೆ.'

ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯಿಲಿ ಸೋಲಿಗೆ ಜಾತಿ ಕಾರಣವಾಗಿದೆ. ನಾವಂದುಕೊಂಡಂತೆ ಸಂಭವಿಸಲಿಲ್ಲ ಎಂದು ರಾಹುಲ್ ಗಾಂಧಿ ನಾಯಕತ್ವವನ್ನು ಸಮರ್ಥಿಸಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.