ಶುಕ್ರವಾರ, ಮಾರ್ಚ್ 5, 2021
29 °C

56 ಪೈಸೆ ಕುಸಿತ ಕಂಡ ರೂಪಾಯಿ

ಪಿಟಿಐ Updated:

ಅಕ್ಷರ ಗಾತ್ರ : | |

56 ಪೈಸೆ ಕುಸಿತ ಕಂಡ ರೂಪಾಯಿ

ಮುಂಬೈ: ಇಲ್ಲಿಯ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಬೆಲೆಯು ಮಂಗಳವಾರ 56 ಪೈಸೆಗಳಷ್ಟು ಕುಸಿತ ದಾಖಲಿಸಿದೆ.

ಈ ವರ್ಷದಲ್ಲಿನ ದಿನದ ಎರಡನೆ ಅತಿದೊಡ್ಡ ಕುಸಿತ ಇದಾಗಿದೆ. ಡಾಲರ್‌ಗೆ ಭಾರಿ ಬೇಡಿಕೆ ಕಂಡು ಬಂದಿದ್ದರಿಂದ ರೂಪಾಯಿ ಬೆಲೆ 68.07ಕ್ಕೆ ಕುಸಿಯಿತು. ಇದು 16 ತಿಂಗಳಲ್ಲಿನ ಕನಿಷ್ಠ ಮಟ್ಟವಾಗಿದೆ. ಜನವರಿ 24ರಂದು ಇದು ₹ 68.15ಕ್ಕೆ ಕುಸಿತ ಕಂಡಿತ್ತು.

ರೂಪಾಯಿ ವಿನಿಮಯ ದರಕ್ಕೆ ಕೆಲ ದೇಶಿ ಮತ್ತು ವಿದೇಶಿ ವಿದ್ಯಮಾನಗಳೂ ಪ್ರತಿಕೂಲವಾಗಿವೆ. ವ್ಯಾಪಾರ  ಕೊರತೆಯಲ್ಲಿನ ಹೆಚ್ಚಳ, ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಕುಸಿತ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆ ಹೆಚ್ಚಳದ ಕಾರಣಕ್ಕೆ ಡಾಲರ್ ಎದುರು ರೂಪಾಯಿ ಬೆಲೆ ಕುಸಿತ ಕಂಡಿದೆ.

ಇನ್ನಷ್ಟು...

ವ್ಯಾಪಾರ ಕೊರತೆ ಹೆಚ್ಚಳ ಸಾಧ್ಯತೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.