ಬುಧವಾರ, ಮಾರ್ಚ್ 3, 2021
25 °C

ರೂಪಾಲಿ ನಾಯ್ಕ ಪೂಜೆ ಸಲ್ಲಿಸಿದ ವಿಡಿಯೊ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೂಪಾಲಿ ನಾಯ್ಕ ಪೂಜೆ ಸಲ್ಲಿಸಿದ ವಿಡಿಯೊ ವೈರಲ್

ಕಾರವಾರ: ವಿಧಾನಸಭೆ ಚುನಾವಣೆಯಲ್ಲಿ ಕಾರವಾರ– ಅಂಕೋಲಾ ಕ್ಷೇತ್ರದಿಂದ ವಿಜೇತರಾದ ಬಿಜೆಪಿಯ ರೂಪಾಲಿ ನಾಯ್ಕ ಅವರು ಭಾವೋದ್ವೇಗಗೊಂಡು ದೇವಸ್ಥಾನದಲ್ಲಿ ಮಂಗಳವಾರ ಪೂಜೆ ಸಲ್ಲಿಸಿದ ವಿಡಿಯೊವೊಂದು ವೈರಲ್ ಆಗಿದೆ.

ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ ಬಳಿಕ ಕುಮಟಾದ ಎ.ವಿ.ಬಾಳಿಗಾ ಕಾಲೇಜಿನ ಮತ ಎಣಿಕೆ ಕೇಂದ್ರದಿಂದ ವಾಪಸಾಗಿ ಅಂಕೋಲಾದ ಶಾಂತದುರ್ಗಾ ದೇವಸ್ಥಾನದಲ್ಲಿ ತೆರಳಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎರಡು ತೆಂಗಿನಕಾಯಿಗಳು ಹಾಗೂ ಹೂವು ಇಡಲಾಗಿದ್ದ ತಟ್ಟೆಯನ್ನು ಹಿಡಿದುಕೊಂಡಿದ್ದ ಅವರು, ‘ಅಮ್ಮಾ.. ಅಮ್ಮಾ..’ ಎಂದು ಕೂಗಿಕೊಂಡು ಬಳಲಿದಂತಾಗಿ ಮಂಡಿಯೂರಿ ಕುಳಿತರು. ಅವರ ಜತೆಗಿದ್ದವರು ಕೂಡಲೇ ಸಮಾಧಾನ ಮಾಡಿ ಆರೈಕೆ ಮಾಡಿದರು.

ಬಿಜೆಪಿ ವಲಯದಲ್ಲಿ ನಿರೀಕ್ಷೆಗೂ ಮೀರಿ ಮತಗಳ ಅಂತರದಿಂದ ಜಯ ಸಾಧಿಸಿದ್ದ ಅವರು ಮತ ಎಣಿಕೆ ಕೇಂದ್ರದಲ್ಲಿ ಪುತ್ರನನ್ನು ಆಲಂಗಿಸಿ ಭಾವುಕರಾಗಿದ್ದರು. ತಮ್ಮ ಸಮೀಪ ಸ್ಪರ್ಧಿ ಜೆಡಿಎಸ್‌ನ ಆನಂದ ಅಸ್ನೋಟಿಕರ್ ವಿರುದ್ಧ 14,064 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.