ಹೋಟೆಲ್‌ನಿಂದ ವಿಧಾನಸೌಧಕ್ಕೆ ಬಂದ ಮಸ್ಕಿ ಶಾಸಕ ಪ್ರತಾಪ್‌ಗೌಡ

7
ಪೊಲೀಸ್‌ ಭದ್ರತೆಯಲ್ಲಿ ಪ್ರವೇಶ

ಹೋಟೆಲ್‌ನಿಂದ ವಿಧಾನಸೌಧಕ್ಕೆ ಬಂದ ಮಸ್ಕಿ ಶಾಸಕ ಪ್ರತಾಪ್‌ಗೌಡ

Published:
Updated:
ಹೋಟೆಲ್‌ನಿಂದ ವಿಧಾನಸೌಧಕ್ಕೆ ಬಂದ ಮಸ್ಕಿ ಶಾಸಕ ಪ್ರತಾಪ್‌ಗೌಡ

ಬೆಂಗಳೂರು: ಶನಿವಾರ ಬೆಳಿಗ್ಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಕಾಣಿಸಿಕೊಳ್ಳದ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಪ್ರತಾಪ್‌ಗೌಡ ಪಾಟೀಲ್‌ ಮಧ್ಯಾಹ್ನ 2:45ಕ್ಕೆ ವಿಧಾನಸೌಧಕ್ಕೆ ಬಂದರು.

ಗೋಲ್ಡ್‌ಫಿಂಚ್‌ ಹೋಟೆಲ್‌ನಿಂದ ಪ್ರತಾಪ್‌ಗೌಡ ಪೊಲೀಸ್‌ ಭದ್ರತೆಯಲ್ಲಿ ವಿಧಾನಸೌಧಕ್ಕೆ ಬರುತ್ತಿದ್ದಂತೆ ಡಿ.ಕೆ.ಶಿವಕುಮಾರ್‌ ವಿಪ್ ನೀಡಿದರು.

ಪ್ರತಾಪ್‌ಗೌಡ ವಿಧಾನಸೌಧದಲ್ಲಿಯೇ ಮಧ್ಯಾಹ್ನದ ಭೋಜನ ಸೇವಿಸಿದರು. ಕಾಂಗ್ರೆಸ್‌ನ ಡಿಕೆ ಸುರೇಶ್‌ ಹಾಗೂ ದಿನೇಶ್‌ ಗುಂಡೂರಾವ್‌ ಜತೆಗಿದ್ದರು.

‘ಪ್ರತಾಪ್‌ಗೌಡ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ಪರ ಮತ ಚಲಾಯಿಸುತ್ತಾರೆ‌’ ಎಂದು ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry