ಪತ್ನಿ ಜತೆ ಸಲುಗೆ ಸ್ನೇಹಿತನಿಂದ ರೌಡಿ ಹತ್ಯೆ

7

ಪತ್ನಿ ಜತೆ ಸಲುಗೆ ಸ್ನೇಹಿತನಿಂದ ರೌಡಿ ಹತ್ಯೆ

Published:
Updated:

ಬೆಂಗಳೂರು: ಪತ್ನಿ ಜತೆ ಸಲುಗೆ ಹೊಂದಿದ್ದನೆಂಬ ಕಾರಣಕ್ಕೆ ರೌಡಿ ರಾಕೇಶ್ ಅಲಿಯಾಸ್ ಜಾಕಿಯನ್ನು ಕೊಲೆ ಮಾಡಿದ್ದ ಪ್ರಕಾಶ್‌ ಎಂಬಾತನನ್ನು ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಪ್ರಕಾಶ್‌, ತನ್ನ ಸಹಚರರ ಜತೆ ಸೇರಿಕೊಂಡು ಮೇ 18ರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಜಾಕಿಯನ್ನು ಕೊಂದಿದ್ದ. ಕೃತ್ಯದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದರ ಆಧಾರದಲ್ಲಿ ಪ್ರಕಾಶ್‌ ಹಾಗೂ ಆತನ ಐವರು ಸಹಚರರನ್ನು ಬಂಧಿಸಿದ್ದೇವೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಮೇ 30ರವರೆಗೆ ವಶಕ್ಕೆ ಪಡೆದುಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry