ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿನಾಶಿ ಪ್ಲಾಸ್ಟಿಕ್‌

Last Updated 4 ಜೂನ್ 2018, 19:30 IST
ಅಕ್ಷರ ಗಾತ್ರ

ಪ್ಲಾ ಸ್ಟಿಕ್‌ನ ಅಪಾಯ ಅರಿತು ಕೆಲವು ಈ ದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧ ವಿಧಿಸಲಾಗಿದೆ. 10 ವರ್ಷಗಳ ಹಿಂದೆಯೇ ರುವಾಂಡಾ ಸರ್ಕಾರ ಪ್ಲಾಸ್ಟಿಕ್‌ ಮೇಲೆ ನಿಷೇಧ ವಿಧಿಸಿದೆ. ಪ್ಲಾಸ್ಟಿಕ್ ನಿಷೇಧಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿರುವ ಈ ದೇಶ ಕೆಲ ದಿನಗಳಲ್ಲೇ ಪ್ಲಾಸ್ಟಿಕ್ ಮುಕ್ತ ರಾಷ್ಟ್ರವಾಗಿ ಅವತರಿಸಲಿದೆ.

ನಮ್ಮ ದೇಶದ ಸಿಕ್ಕಿಂ ರಾಜ್ಯದಲ್ಲೂ ಹಲವು ವರ್ಷಗಳ ಹಿಂದೆಯೇ ಕ್ಯಾರಿಬ್ಯಾಗ್‌, ಎರಡು ವರ್ಷದ ಹಿಂದೆ ನೀರಿನ ಬಾಟಿಲ್ಸ್ ಮತ್ತು ಬಳಸಿ ಬಿಸಾಡುವ ಪ್ಲೇಟ್‌ಗಳನ್ನು ನಿಷೇಧಿಸಲು ಕ್ರಮ ಕೈಗೊಂಡಿದೆ.

ಅಮೆರಿಕದ ಕೆಲವು ರಾಷ್ಟಗಳು, ಆಸ್ಟ್ರೇಲಿಯಾ, ಚೀನಾ, ಜಿಂಬಾಬ್ವೆ, ತೈವಾನ್, ಕೆನಡಾ. ಫ್ರಾನ್ಸ್‌, ಇಂಗ್ಲೆಂಡ್, ಐರ್ಲೆಂಡ್‌ ಮುಂತಾದ ದೇಶಗಳಲ್ಲಿ ಪ್ಲಾಸ್ಟಿಕ್‌ ಚೀಲಗಳ ಬಳಕೆ ಮೇಲೆ ನಿಷೇಧ ವಿಧಿಸಲಾಗಿದೆ. ಇದರಿಂದ ಇವುಗಳ ಬಳಕೆ ಪ್ರಮಾಣ ಶೇ 70ರಿಂದ ಶೇ 85ರಷ್ಟು ಕಡಿಮೆ ಆಗಿದೆ.

ಪ್ಲಾಸ್ಟಿಕ್‌ ಬದಲಿಗೆ ಬೇರೆ ವಸ್ತುಗಳನ್ನು ಬಳಸಿ

ಈಗ ನಮ್ಮ ಮುಂದೆ ಎರಡೇ ಆಯ್ಕೆಗಳಿವೆ. ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು ಇಲ್ಲದಿದ್ದರೆ ಆರೋಗ್ಯ ಹಾಳು ಮಾಡಿಕೊಳ್ಳಬೇಕು. ಹೀಗಾಗಿ ಪ್ಲಾಸ್ಟಿಕ್ ಬದಲಿಗೆ ಬೇರೆ ವಸ್ತುಗಳನ್ನಸು ಬಳಸುವುದು ಒಳ್ಳೆಯದು.

* ಪ್ಲಾಸ್ಟಿಕ್ ಬದಲಿಗೆ ಲೋಹದ ಬಾಟಲಿಗಳನ್ನು ಬಳಸಿ

* ಹೋಟೆಲ್‌ನಿಂದ ಮನೆಗೆ ಆಹಾರ ಪದಾರ್ಥಗಳನ್ನು ತಂದುಕೊಳ್ಳಬೇಕೆಂದರೆ ಮನೆಯಿಂದಲೇ ಕ್ಯಾರಿಯರ್ ಬಾಕ್ಸ್‌ಗಳನ್ನು ತೆಗೆದುಕೊಂಡು ಹೋಗಿ.

* ಪ್ಲಾಸ್ಟಿಕ್ ಸ್ಟ್ರಾಗಳ ಬದಲಿಗೆ ಸ್ಟೀಲ್‌, ಬಿದಿರಿನ ಸ್ಟ್ರಾಗಳನ್ನು ಬಳಸಿ

* ಪ್ಲಾಸ್ಟಿಕ್ ಸ್ಪೂನ್‌ಗಳ ಬದಲಿಗೆ ಸ್ಟೀಲ್ ಅಥವಾ ಮರದ ಸ್ಪೂನ್‌ಗಳನ್ನು ಬಳಸಿ

* ಮುಖ್ಯವಾಗಿ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಬಳಸುವುದು ಕೂಡಲೇ ನಿಲ್ಲಿಸಿ

* ಬೆಳಗ್ಗೆ ಎದ್ದಾಗ ಹಾಲಿನ ಪ್ಯಾಕೆಟ್‌ಗಳಿಂದ ಹಿಡಿದು, ರಾತ್ರಿ ಮಲಗುವವರೆಗೆ ಎಲ್ಲೆಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತೇವೆ ಎಂಬುದನ್ನು ಪಟ್ಟಿ ಮಾಡಿಕೊಳ್ಳಿ. ಅವುಗಳ ಸ್ಥಾನದಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಲು ಪ್ರಯತ್ನಿಸಿ

ವಿಶ್ವದಾದ್ಯಂತ ಬಳಸುತ್ತಿರುವ ಪ್ಲಾಸ್ಟಿಕ್ ಪ್ರಮಾಣ ಯಾವ ಮಟ್ಟಿಗೆ ಎಂದರೆ...

* ವಾರ್ಷಿಕ 50 ಸಾವಿರ ಕೋಟಿ ಪ್ಲಾಸ್ಟಿಕ್ ಚೀಲಗಳು ಬಳಕೆಯಾಗುತ್ತಿವೆ.

* ನಿಮಿಷಕ್ಕೆ 20 ಲಕ್ಷ ಕ್ಯಾರಿಬ್ಯಾಗ್‌ಗಳು ಅಂಗಡಿಗಳಿಂದ ಗ್ರಾಹಕರ ಮೆನಗೆ ಸೇರುತ್ತಿವೆ.

* ನಿಮಿಷಕ್ಕೆ ಒಂದು ಟ್ರಕ್‌ ಪ್ಲಾಸ್ಟಿಕ್ ಸಮುದ್ರ ಸೇರುತ್ತಿದೆ. ಅಂದರೆ ವಾರ್ಷಿಕ ಕನಿಷ್ಠ 80 ಲಕ್ಷ ಟನ್!

* ಲಭಿಸುತ್ತಿರುವ ಕಚ್ಚಾತೈಲದಲ್ಲಿ 8ರಿಂದ 10ರಷ್ಟು ಪ್ಲಾಸ್ಟಿಕ್ ತಯಾರಿಗೇ ಬಳಕೆಯಾಗುತ್ತಿದೆ.

* ಮೀನುಗಾರರು ಬೀಸುವ ಬಲೆಗೆ ಮೀನಿಗಿಂತ ಪ್ಲಾಸ್ಟಿಕ್‌ ವಸ್ತುಗಳೇ ಹೆಚ್ಚಾಗಿ ದೊರೆಯುತ್ತಿವೆ. 10 ತಿಂಗಳಲ್ಲಿ ಕೇರಳದ ಮೀನುಗಾರರು ಸುಮಾರು 25 ಟನ್ ಪ್ಲಾಸ್ಟಿಕ್ ಹೊರ ತೆಗೆದಿದ್ದಾರೆ.

* ಅಮೆರಿಕದಲ್ಲಿ ಶೇ 94ರಷ್ಟು ಮತ್ತು ಭಾರತದಲ್ಲಿ ಶೇ 86ರಷ್ಟು ನಳದ ಮೂಲಕ ಪೂರೈಕೆಯಾಗುವ ನೀರಿನಲ್ಲಿ ಪ್ಲಾಸ್ಟಿಕ್ ಇರುವುದು ಪತ್ತೆಯಾಗಿದೆ.

* ವಾರ್ಷಿಕ 30 ಕೋಟಿ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ!

**

ಎಷ್ಟು ವರ್ಷಗಳು ಬೇಕು?

ನಮ್ಮ ಉಸಿರಾಟ ನಿಂತರೆ, ದೇಹ ಸುಟ್ಟು ಬೂದಿಯಾಗುತ್ತದೆ ಅಥವಾ ಮಣ್ಣಿನಲ್ಲಿ ಬೆರೆತು ಹೋಗುತ್ತದೆ. ಹಾಗೆಯೇ ಎಲ್ಲ, ಜೀವಿಗಳು ಎಲ್ಲ ಪದಾರ್ಥಗಳು, ಕೆಲವು ವಸ್ತುಗಳು ಪ್ರಕೃತಿಯಲ್ಲಿ ಲೀನವಾಗುತ್ತವೆ. ಆದರೆ ಪ್ಲಾಸ್ಟಿಕ್ ಮಾತ್ರ 300 ವರ್ಷಗಳಾದರೂ ಸ್ವಲ್ಪವೂ ಹಾಳಾಗದೆ ಹಾಗೆಯೇ ಇರುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆ ಆರಂಭಿಸಿ 40 ವರ್ಷಗಳೂ ಆಗಿಲ್ಲ. ಆದರೆ ನಾವು ಬಳಸಿ ಬಿಸಾಡಿದ ಶೇ 79ರಷ್ಟು ಪ್ಲಾಸ್ಟಿಕ್‌ ಹಾಗೆಯೇ ಉಳಿದಿದೆ. ಇದೆಲ್ಲಾ ಭೂಮಿಯಲ್ಲಿ ಅಥವಾ, ಸಮುದ್ರದಲ್ಲಿ ಬೆರೆತು ಪರಿಸರ ನಾಶ ಮಾಡುತ್ತಿದೆ. ವಿವಿಧ ರೀತಿಯ ಪ್ಲಾಸ್ಟಿಕ್ ವಸ್ತುಗಳು ಸಮುದ್ರದಲ್ಲಿ ಸಂಪೂರ್ಣವಾಗಿ ಬೆರೆಯಲು ಹಲವು ವರ್ಷಗಳೇ ಬೇಕು ಅದರ ಮಾಹಿತಿ ಇಲ್ಲಿದೆ.

* ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್  500ರಿಂದ 1000 ವರ್ಷ

* ಪ್ಲಾಸ್ಟಿಕ್ ಬಾಟಿಲ್ – ಸುಮಾರು 450 ವರ್ಷ

* ಟೀ,ಕಾಫಿ ಕುಡಿಯುವ ಫೋಮ್ ಕಪ್ಸ್ –50 ವರ್ಷ

* ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಬಳಸುವ ಸ್ಟೈರೊಫೋಮ್ ಕಪ್ಸ್‌– 1,000 ವರ್ಷ ಕಳೆದರೂ ಹಾಗೆಯೇ ಇರುತ್ತದೆ.

* ಮಕ್ಕಳಿಗೆ ಬಳಸುವ ನ್ಯಾಪಿ –450 ವರ್ಷ

* ಸ್ಯಾನಿಟರಿ ನ್ಯಾಪ್‌ಕಿನ್ಸ್–500ರಿಂದ 800 ವರ್ಷ

* ಡಿಯೊಡ್ರೆಂಟ್ ಸ್ಪ್ರೇ ಬಾಟಲ್ಸ್ – 500 ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT