ಸಾಲಭಾದೆ: ರೈತ ಆತ್ಮಹತ್ಯೆ

7

ಸಾಲಭಾದೆ: ರೈತ ಆತ್ಮಹತ್ಯೆ

Published:
Updated:
ಸಾಲಭಾದೆ: ರೈತ ಆತ್ಮಹತ್ಯೆ

ಕಲಬುರ್ಗಿ: ಸೇಡಂ ತಾಲ್ಲೂಕು ಸಟಪಟನಹಳ್ಳಿಯಲ್ಲಿ ಸಾಲಭಾದೆಯಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಿಮರಾಯ ರಾಯಚೂರಕರ್ (55) ಮೃತಪಟ್ಟವರು. ತಮ್ಮ ಜಮೀನಿನಲ್ಲಿದ್ದ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. 

ಇವರು ವಿವಿಧ ಬ್ಯಾಂಕ್ ಮತ್ತು ಖಾಸಗಿ ವ್ಯಕ್ತಿಗಳ ಬಳಿ ₹5 ಲಕ್ಷ ಸಾಲ ಮಾಡಿದ್ದರು. ಸಾಲ ತೀರಿಸಲು ಆಗದೆ ಪರದಾಡುತ್ತಿದರು. ಅಲ್ಲದೆಸಾಲ ತೀರಿಸಲು ಎರಡು ಎಕರೆ ಜಮೀನು ಕೂಡ ಮಾರಾಟ ಮಾಡಿದ್ದರು. ಆದರೂ ಸಾಲ ತೀರಿರಲಿಲ್ಲ. ಉಳಿಕೆ ಸಾಲ ಪಾವತಿಸುವಂತೆ ಬ್ಯಾಂಕ್ ಅಧಿಕಾರಿಗಳು ಒತ್ತಡ ಹೇರಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry