ಅಮ್ಮನೇ ಪ್ರೇರಣೆ

7

ಅಮ್ಮನೇ ಪ್ರೇರಣೆ

Published:
Updated:
ಅಮ್ಮನೇ ಪ್ರೇರಣೆ

‘ಅಧ್ಯಯನ ಮಾಡುವಂತೆ ಯಾರೂ ನನಗೆ ಬಲವಂತ ಮಾಡಲಿಲ್ಲ. ಆದರೆ, ನನ್ನ ಅಮ್ಮನನ್ನು ಸಂತೋಷವಾಗಿಡಲು ನಾನು ಓದಿದೆ’

ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ (ಐಎಸ್‌ಸಿ) ಬೋರ್ಡ್‌ನ 12ನೇ ತರಗತಿ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ಸ್ಥಾನ ಗಳಿಸಿದ ಅಭಿಜ್ಞಾನ ಚಕ್ರವರ್ತಿ ಮಾತಿದು.

ಶೇ 99.5ರಷ್ಟು ಅಂಕ ಗಳಿಸಿರುವ ಈ ಹುಡುಗನಲ್ಲಿ ಉತ್ಸಾಹ ಪುಟಿದೇಳುತ್ತಿದೆ. 2016ರಲ್ಲಿ ಆತನ ಕುಟುಂಬ ಕೋಲ್ಕತ್ತದಿಂದ ಮುಂಬೈಗೆ ಸ್ಥಳಾಂತರಗೊಂಡಿತು.

‘ನಾನು ಕೋಲ್ಕತ್ತವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೆ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು, ಹೊಸ ಗೆಳೆಯರನ್ನು ಮಾಡಿಕೊಳ್ಳಲು ಸಾಕಷ್ಟು ಸಮಯ ಹಿಡಿಯಿತು. ಯಾರೂ ಬಲವಂತ ಮಾಡದಿದ್ದರೂ ನಾನು ಓದಿನಲ್ಲಿ ಬಹುಬೇಗ ಕುದುರಿಕೊಂಡೆ’ ಎಂದು ಅಭಿಜ್ಞಾನ ಹೇಳುತ್ತಾನೆ. ಲೀಲಾವತಿಬಾಯಿ ಪೋದ್ದಾರ್‌ ಶಾಲೆಯ ವಿದ್ಯಾರ್ಥಿಯಾದ ಈತ, ತನ್ನ ಯಶಸ್ಸಿನಲ್ಲಿ ಅಮ್ಮನ ಪಾತ್ರ ಹಿರಿದಾಗಿದೆ ಎಂದು ಹೇಳಲು ಮರೆಯುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry