ನಟ ಪುನೀತ್‌ ರಾಜ್‌ಕುಮಾರ್‌ ಕಾರು ಅಪಘಾತ

7
ಆಂಧ್ರಪ್ರದೇಶದ ಅನಂತಪುರ ಬಳಿ ಗುರುವಾರ ರಾತ್ರಿ ಘಟನೆ

ನಟ ಪುನೀತ್‌ ರಾಜ್‌ಕುಮಾರ್‌ ಕಾರು ಅಪಘಾತ

Published:
Updated:

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಬಳಿ ಗುರುವಾರ ರಾತ್ರಿ 9.30ರ ಸುಮಾರಿಗೆ ನಡೆದಿದೆ.

ಕಾರಿನಲ್ಲಿ ಪುನೀತ್‌ ಮತ್ತು ಸ್ನೇಹಿತರು ಸೇರಿ ನಾಲ್ವರು ಇದ್ದರು. ಬಳ್ಳಾರಿಯಲ್ಲಿ ‘ನಟಸಾರ್ವಭೌಮ‘ ಚಿತ್ರದ ಶೂಟಿಂಗ್ ಮುಗಿಸಿ ಹಿಂದಿರುಗುತ್ತಿದ್ದಾಗ ಆಪಘಾತ ನಡೆದಿದೆ.

ನಗರಕ್ಕೆ ಮರಳುವ ಮಾರ್ಗದಲ್ಲಿ ಅನಂತಪುರದ ಸಮೀಪ ರಸ್ತೆ ತಿರುವಿನಲ್ಲಿ ಕಾರಿನ ಟಯರ್‌ ಕಲ್ಲಿಗೆ ಬಡಿದು ಸ್ಫೋಟಗೊಂಡು, ಹೆಡ್‌ಲೈಟ್‌ ಬಳಿ ಬಂಪರ್‌ಗೆ ಹಾನಿಯಾಗಿದೆ.

ಪುನೀತ್‌ ಎದುರು ಮತ್ತು ಅವರ ಸ್ನೇಹಿತರು ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ಘಟನೆ ನಡೆದ ನಂತರ ಪುನೀತ್‌ ಮತ್ತು ಸ್ನೇಹಿತರು ಅದೇ ಮಾರ್ಗದಲ್ಲಿ ಬರುತ್ತಿದ್ದ ಪರಿಚಯದವರೊಬ್ಬರ ಕಾರಿನಲ್ಲಿ ನಗರಕ್ಕೆ ಮರಳಿದ್ದಾರೆ.

ಸ್ಫೋಟದ ಶಬ್ದ ಕೇಳಿಸಿದ್ದರಿಂದ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದರು. ಅವರೊಂದಿಗೆ ನಟ ಪುನೀತ್‌ ನಗುತ್ತ ಮಾತನಾಡುತ್ತಿರುವ ವಿಡಿಯೊ ವಾಟ್ಸ್ಆ್ಯಪ್‌ಗಳಲ್ಲಿ ಹರಿದಾಡುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry