ತ್ವಚೆಯ ಆರೈಕೆಗೆ ನೇರಳೆ

7

ತ್ವಚೆಯ ಆರೈಕೆಗೆ ನೇರಳೆ

Published:
Updated:
ತ್ವಚೆಯ ಆರೈಕೆಗೆ ನೇರಳೆ

ಸಿಹಿ ಮಿಶ್ರಿತವಾದ ಒಗರು ರುಚಿಯ ನೇರಳೆ ಹಣ್ಣು, ತಿಂದರೆ ಬಾಯೆಲ್ಲ ನೇರಳೆ ರಂಗು. ಸದ್ಯ ಈ ಹಣ್ಣಿನ ಸುಗ್ಗಿ ಕಾಲ. ರುಚಿಗಷ್ಟೇ ಅಲ್ಲ ಸೌಂದರ್ಯ ವರ್ಧನೆಗೂ ಈ ಹಣ್ಣು ಸಹಕಾರಿ. ನೇರಳೆ ಹಣ್ಣು ಬಳಸಿ ಮನೆಯಲ್ಲಿಯೇ ಮಾಡಬಹುದಾದ ಸೌಂದರ್ಯ ಚಿಕಿತ್ಸೆಗಳು ಇಂತಿವೆ...

* ನೇರಳೆ ಹಣ್ಣನ್ನು ರುಬ್ಬಿ ಅದಕ್ಕೆ ಹಾಲು ಸೇರಿಸಿ ಪೇಸ್ಟ್‌ ಸಿದ್ಧಪಡಿಸಬೇಕು. ರಾತ್ರಿ ಮಲಗುವ ಮುನ್ನ ಮೊಡವೆಗಳ ಮೇಲೆ ಇದನ್ನು ಲೇಪಿಸಿ ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ಮುಖತೊಳೆದರೆ ಕ್ರಮೇಣ ಮೊಡವೆಗಳು ಮಾಯವಾಗುತ್ತವೆ.

* ನೇರಳೆ ಹಣ್ಣಿನ ಬೀಜಕ್ಕೆ ಕಿತ್ತಳೆ ಹಣ್ಣು, ಒಂದು ಟಿ ಚಮಚ ಲಿಂಬೆ ರಸ, ಬಾದಾಮಿ ಎಣ್ಣೆ, ಗುಲಾಬಿ ಜಲ, ಕಡಲೆ ಹಿಟ್ಟು ಸೇರಿಸಿದ ಮಿಶ್ರಣವನ್ನು ಫೇಸ್‌ ಪ್ಯಾಕ್‌ ಮಾಡಿಕೊಂಡು 15 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆದರೆ ತ್ವಚೆ ಕಾಂತಿಯುತವಾಗುತ್ತದೆ.

* ನೇರಳೆಹಣ್ಣಿಗೆ ಬಾರ್ಲಿಹಿಟ್ಟು, ನೆಲ್ಲಿಕಾಯಿ ರಸ, ಹಾಗೂ ಗುಲಾಬಿ ಜಲವನ್ನು ಸೇರಿಸಿದ ಮಿಶ್ರಣವನ್ನು ಪೇಸ್‌ ಪ್ಯಾಕ್‌ ಆಗಿ ಬಳಸಬಹುದು. ನಿತ್ಯ ಈ ರೀತಿ ಮಾಡುವುದರಿಂದ ಕ್ರಮೇಣ ತ್ವಚೆಯಲ್ಲಿನ ಅನಗತ್ಯ ಎಣ್ಣೆ ಅಂಶ ಕಡಿಮೆಯಾಗುತ್ತದೆ.

* ನೇರಳೆ ಹಣ್ಣಿಗೆ ಲಿಂಬೆ ರಸ, ಕಡಲೆ ಹಿಟ್ಟು, ಬಾದಾಮಿ ಎಣ್ಣೆ, ಗುಲಾಬಿ ಜಲ ಸೇರಿಸಿದ ಮಿಶ್ರಣವನ್ನು ನಿತ್ಯ ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಮುಖದಲ್ಲಿನ ಕಪ್ಪು ಕಲೆ ಕ್ರಮೇಣ ದೂರಾಗುತ್ತದೆ.

* ನೇರಳೆ ಹಣ್ಣಿನಲ್ಲಿ ಯಥೇಚ್ಚವಾಗಿ ಬ್ಯಾಕ್ಟಿರಿಯ ನಿರೋಧಕ ಶಕ್ತಿ ಇದೆ. ಇದರ ನಿಯಮಿತ ಸೇವನೆ ಹಲ್ಲು ಹುಳುಕಾಗದಂತೆ ತಡೆಯುತ್ತದೆ. ಹಲ್ಲಿನ ಹಳದಿ ಬಣ್ಣವನ್ನು ದೂರಾಗಿಸುವಲ್ಲಿಯೂ ಪರಿಣಾಮಕಾರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry