ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10-6-1968

Last Updated 9 ಜೂನ್ 2018, 19:30 IST
ಅಕ್ಷರ ಗಾತ್ರ

ಶೋಷಣೆ ವಿರುದ್ಧ ರೈತರಿಗೆ ಸಹಕಾರ ಶ್ರೀರಕ್ಷೆಯಾಗಲಿ
ಮಂಡ್ಯ, ಜೂನ್‌ 9– ‘ಸರ್ವ ಸ್ವಾಮ್ಯ ಪ್ರವೃತ್ತಿಯ ಶ್ರೀಮಂತ ಸಮಾಜದ ಹಿಡಿತ ಮತ್ತು ಶೋಷಣೆಯಿಂದ ಬಡ ರೈತರನ್ನು ಸಹಕಾರ ಸಂಸ್ಥೆಗಳು ರಕ್ಷಿಸಬೇಕು. ಸಮಾಜವಾದಿ ಸಮಾಜ ಸ್ಥಾಪನೆಗೆ ಸಹಕಾರ ಚಳವಳಿ ಪ್ರಬಲ ಸಾಧನವಾಗಬೇಕು’ ಎಂದು ಕೇಂದ್ರ ಆಹಾರ, ಕೃಷಿ ಮತ್ತು ಸಹಕಾರ ಸಚಿವ ಶ್ರೀ ಜಗಜೀವನರಾಮ್‌ ಅವರು ಇಂದು ಇಲ್ಲಿ ಕರೆನೀಡಿದರು.

ಮೂರು ದಿನಗಳಿಂದ ಇಲ್ಲಿ ನಡೆದ ರಾಜ್ಯದ ದ್ವಿತೀಯ ಸಹಕಾರ ಸಮ್ಮೇಳನದ ಮುಕ್ತಾಯ ಭಾಷಣವನ್ನು ಅವರು ಮಾಡಿದರು.

ಆಂಧ್ರಕ್ಕೆ ಪ್ರಧಾನಿ ಪತ್ರ ಇಲ್ಲ 
ಹೈದರಾಬಾದ್‌, ಜೂನ್‌ 9– ಕೃಷ್ಣಾ ನದಿ ವಿವಾದವನ್ನು ಪಂಚಾಯ್ತಿಗೆ ಒಪ್ಪಿಸುವ ಬಗ್ಗೆ ಪ್ರಧಾನಿಯಿಂದ ಆಗಲಿ, ಕೇಂದ್ರ ಸರ್ಕಾರದಿಂದಾಗಲಿ ತಮಗೆ ಪತ್ರವೇನೂ ಬಂದಿಲ್ಲವೆಂದು ಆಂಧ್ರದ ಮುಖ್ಯಮಂತ್ರಿ ಬ್ರಹ್ಮಾನಂದ ರೆಡ್ಡಿ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಅಸಮರ್ಪಕವಾದರೂ ಅಸಾಮಾನ್ಯ ಪ್ರಗತಿ ಸಾಧನೆ: ವೀರೇಂದ್ರ
ಬೆಂಗಳೂರು, ಜೂನ್‌ 9 – ‘ನಿರೀಕ್ಷಿಸಿದಷ್ಟು ಪ್ರಗತಿ ಸಾಧಿಸಿಲ್ಲ ಎಂಬುದು ಸತ್ಯ. ಆದರೆ ಇದುವರೆಗೆ ಸಾಧಿಸಲಾದ ಪ್ರಗತಿ ಅಸಾಮಾನ್ಯವಾದುದು’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರಪಾಟೀಲ್‌ ಹೇಳಿದರು.

ಸಿಡಿ ಗುಂಡಿಗೆ ಸಿಕ್ಕಿ ಸಾಯುವ ಅಮೆರಿಕನ್ನರು
ವಾಷಿಂಗ್ಟನ್‌, ಜೂನ್‌ 9 – ವಿಯಟ್ನಾಂ ಯುದ್ಧದಲ್ಲಿ ಸಾಯುವ ಅಮೆರಿಕನ್ನರಿಗಿಂತ ಸ್ವದೇಶದಲ್ಲಿ ಗುಂಡಿಗೆ ಸಿಕ್ಕಿ ಸಾಯುವ ಅಮೆರಿಕನ್ನರ ಸಂಖ್ಯಯೇ ಹೆಚ್ಚು.

ಸರಾಸರಿ ಒಂದು ದಿನಕ್ಕೆ ಐವತ್ತು ಜನ ಗುಂಡಿಗೆ ಬಲಿಯಾಗುತ್ತಾರೆ. ಅಂದರೆ ಪ್ರತಿ ಅರ್ಧಗಂಟೆಗೆ ಒಬ್ಬನ ಆಹುತಿಯಾಗಿರುತ್ತದೆ.

ಅಮೆರಿಕದಲ್ಲಿ ಪಿಸ್ತೂಲು, ತುಪಾಕಿ ಮುಂತಾದ ಕೋವಿಗಳನ್ನು ಕೊಳ್ಳುವುದು ಸುಲಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT