ಸೋಮವಾರ, ಡಿಸೆಂಬರ್ 9, 2019
22 °C

ಮದುವೆಗೆ ಒಪ್ಪದಿದ್ದಕ್ಕೆ ಫೇಸ್‌ಬುಕ್‌ನಲ್ಲಿ ಫೋಟೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮದುವೆಯಾಗಲು ಒಪ್ಪಲಿಲ್ಲವೆಂಬ ಕಾರಣಕ್ಕೆ ಯುವತಿಯೊಬ್ಬರ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿ, ಕೆಟ್ಟದಾಗಿ ಬಿಂಬಿಸಿದ್ದ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ 25 ವರ್ಷದ ಯುವತಿ ದೂರು ನೀಡಿದ್ದರು. ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದೆವು’ ಎಂದು ನಂದಿನಿಲೇಔಟ್ ಪೊಲೀಸರು ಹೇಳಿದರು.

‘ಯುವತಿ ಜತೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ಅವರ ಪರಿಚಯ ಮಾಡಿಕೊಂಡು ಮೊಬೈಲ್ ನಂಬರ್ ಪಡೆದುಕೊಂಡಿದ್ದ.

ನಿತ್ಯವೂ ಕರೆ ಮಾಡಲಾರಂಭಿಸಿದ್ದ. ‘ನೀನು ನನಗೆ ಇಷ್ಟ. ಮದುವೆಯಾಗು’ ಎಂದು ಪೀಡಿಸಲಾರಂಭಿಸಿದ್ದ. ಈ ವಿಷಯವನ್ನು ಸಂತ್ರಸ್ತೆ, ತಮ್ಮ ಪೋಷಕರಿಗೆತಿಳಿಸಿದ್ದರು. ಅವರು ಆರೋಪಿಗೆ ಬುದ್ಧಿವಾದ ಹೇಳಿದ್ದರು’. ಇದರಿಂದ ಕೋಪಗೊಂಡ ಆರೋಪಿ, ಯುವತಿ ಮತ್ತು ಅವರ ತಾಯಿ ಫೋಟೊಗಳನ್ನು ಅರೆನಗ್ನ ಫೋಟೊಗಳೊಂದಿಗೆ ಹೊಂದಿಸಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ.

ಪ್ರತಿಕ್ರಿಯಿಸಿ (+)