ಸ್ಥಳೀಯರಿಗೆ ಟೋಲ್ ಶುಲ್ಕ- ಪ್ರತಿಭಟನೆ

7
ಮೂರು ಗಂಟೆಗೂ ಹೆಚ್ಚು ಕಾಲ ವಾಹನಗಳು ಚಲಿಸದೆ ಸಂಚಾರ ದಟ್ಟಣೆ

ಸ್ಥಳೀಯರಿಗೆ ಟೋಲ್ ಶುಲ್ಕ- ಪ್ರತಿಭಟನೆ

Published:
Updated:
ಸ್ಥಳೀಯರಿಗೆ ಟೋಲ್ ಶುಲ್ಕ- ಪ್ರತಿಭಟನೆ

ಆನೇಕಲ್: ರಾಷ್ಟ್ರೀಯ ಹೆದ್ದಾರಿ 7ರ ಅತ್ತಿಬೆಲೆ ಟೋಲ್ ಕೇಂದ್ರದಲ್ಲಿ ಸ್ಥಳೀಯ ವಾಣಿಜ್ಯ ವಾಹನಗಳು ಟೋಲ್ ಶುಲ್ಕ ಪಾವತಿಸಬೇಕು ಎಂದು ಬಿಇಟಿಎಲ್ ಸಂಸ್ಥೆಯು ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಲಾರಿಗಳು, ಟಿಪ್ಪರ್‌ಗಳನ್ನು ಟೋಲ್ ಬಳಿ ಆಡ್ಡಾದಿಡ್ಡಿ ನಿಲ್ಲಿಸಿ ಪ್ರತಿಭಟನೆ ಮಾಡಿದರು.

ಇದರಿಂದ ಮೂರು ತಾಸಿಗೂ ಹೆಚ್ಚು ಕಾಲ ವಾಹನಗಳು ಟೋಲ್‌ನಿಂದ ಮುಂದೆ ಹೋಗದೇ ಸಂಚಾರ ದಟ್ಟಣೆ ಉಂಟಾಯಿತು. ಬೆಂಗಳೂರು, ಹೊಸೂರಿಗೆ ತೆರಳಬೇಕಾದ ನೂರಾರು ವಾಹನಗಳು ಅಲ್ಲೇ ನಿಂತಿದ್ದವು. ಪ್ರಯಾಣಿಕರು ಪರದಾಡುವಂತಾಯಿತು.

ಲಾರಿ ಮಾಲೀಕರ ಸಂಘದ ವೇಣುಗೋಪಾಲ್, ಶೇಖರ್‌ರೆಡ್ಡಿ ಮಾತನಾಡಿ, ಅತ್ತಿಬೆಲೆಯಲ್ಲಿ ಬಿಇಟಿಎಲ್‌ ಸಂಸ್ಥೆಯು ಸ್ಥಳೀಯರಿಗೆ ರಿಯಾಯಿತಿ ನೀಡಬೇಕು ಎಂದರು.

ಸಂಚಾರ ದಟ್ಟಣೆ ತಪ್ಪಿಸಲು ಪೊಲೀಸರು ಟೋಲ್ ಸಂಸ್ಥೆ ಪ್ರತಿನಿಧಿ ಜತೆ ಮಾತುಕತೆ ನಡೆಸಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲು ಮನ ಒಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry