ನಾಯಿ ಜಾಹೀರಾತು ₹25 ಸಾವಿರ ವಂಚನೆ

7

ನಾಯಿ ಜಾಹೀರಾತು ₹25 ಸಾವಿರ ವಂಚನೆ

Published:
Updated:

ಬೆಂಗಳೂರು: ನಾಯಿ ಮಾರಾಟ ಮಾಡುವುದಾಗಿ ‘ಇಂಡಿಯಾ ಮಾರ್ಟ್‌’ ಜಾಲತಾಣದಲ್ಲಿ ಜಾಹೀರಾತು ನೀಡಿದ್ದ ಅಪರಿಚಿತನೊಬ್ಬ, ನಗರದ ನಿವಾಸಿ ರುತೀಶ್‌ಕುಮಾರ್‌ ಎಂಬುವರಿಂದ ₹25 ಸಾವಿರ ಪಡೆದು ವಂಚಿಸಿದ್ದಾನೆ. ಈ ಸಂಬಂಧ ನಗರದ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ಚ್‌ 30ರಂದು ಪ್ರಕಟವಾಗಿದ್ದ ಜಾಹೀರಾತು ನೋಡಿದ್ದ ರುತೀಶ್‌ಕುಮಾರ್‌, ಅದರಲ್ಲಿದ್ದ ಮೊಬೈಲ್‌ ನಂಬರ್‌ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ್ದ ವ್ಯಕ್ತಿಯೊಬ್ಬ, ಮುಂಗಡ ಹಣ ನೀಡಿದರೆ ನಾಯಿ ಮಾರಾಟ ಮಾಡುವುದಾಗಿ ಹೇಳಿದ್ದ ಎಂದು ಪೊಲೀಸರು ತಿಳಿಸಿದರು.

ಅದನ್ನು ನಂಬಿದ್ದ ರುತೀಶ್‌, ಆರೋಪಿ ನೀಡಿದ್ದ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಿದ್ದರು. ಅದಾದ ನಂತರ ಆರೋಪಿಯು ನಾಯಿಯನ್ನು ಕೊಟ್ಟಿರಲಿಲ್ಲ. ಪುನಃ ಹಣ ಕೇಳಿದ್ದ. ಆ ಬಗ್ಗೆ ಪ್ರಶ್ನಿಸುತ್ತಿದ್ದಂತೆ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿದ್ದ. ಅವಾಗಲೇ ರುತೀಶ್ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಹೇಳಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry