ಕ್ರಿಕೆಟ್ ಮೈದಾನವೊಂದರಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಅವರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಅವರೊಂದಿಗೆ ಮಾತನಾಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ. ಈಗ ನಡೆಯುತ್ತಿರುವ ಲೆಜೆಂಡ್ಸ್ ವಿಶ್ವ ಚಾಂಪಿಯನ್ಶಿಪ್ನ (ಡಬ್ಲ್ಯುಸಿಎಲ್) ಪಂದ್ಯದ ವೇಳೆ ಈ ಮಾತುಕತೆ ನಡೆಸಲಾಗಿದೆ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. ಇದೇ ಅಫ್ರಿದಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವನ್ನು ಟೀಕಿಸಿದ್ದರು. ಅಲ್ಲದೇ ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತದ ವಿರುದ್ಧ ಅಸಂಬದ್ಧವಾಗಿ ಮಾತನಾಡಿದ್ದರು ಎಂದೂ ಉಲ್ಲೇಖಿಸಲಾಗುತ್ತಿದೆ. ಆದರೆ, ಇದು ಸುಳ್ಳು. ಫೋಟೊಗಳು ಈ ವರ್ಷದ್ದಲ್ಲ.

ಚಾಂಪಿಯನ್ಶಿಪ್ನ ಭಾಗವಾಗಿ ಭಾರತ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗರ ಪಂದ್ಯ ಜುಲೈ 20ಕ್ಕೆ ನಿಗದಿಯಾಗಿತ್ತು. ಆದರೆ, ಭಾರತದ ಹಲವು ಕ್ರಿಕೆಟಿಗರು ಆಟವಾಡಲು ನಿರಾಕರಿಸಿರುವುದರಿಂದ ಆ ಪಂದ್ಯ ರದ್ದಾಗಿತ್ತು. ಹಾಗಾಗಿ, ಈ ವರ್ಷ ಭಾರತ–ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆದಿಲ್ಲ. ನಟ ಅಜಯ್ ದೇವಗನ್ ಅವರು ಡಬ್ಲ್ಯುಸಿಎಲ್ ತಂಡದ ಸಹಮಾಲೀಕರಾಗಿದ್ದಾರೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊ ಕಳೆದ ವರ್ಷದ ಪಂದ್ಯಾವಳಿಯದ್ದು. ಕಳೆದ ವರ್ಷದ ಜುಲೈ 6ರಂದು ಇಂಗ್ಲೆಂಡ್ನ ಎಜ್ಬಾಸ್ಟನ್ನಲ್ಲಿ ನಡೆದಿದ್ದ ಭಾರತ–ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ವೇಳೆ ಅಜಯ್ ದೇವಗನ್ ಅವರು ಅಫ್ರಿದಿ ಅವರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ತೆಗೆದ ಫೋಟೊಗಳು. ಹಲವರು ಈ ಬಗ್ಗೆ ಕಳೆದ ವರ್ಷವೇ ಪೋಸ್ಟ್ಗಳನ್ನು ಮಾಡಿದ್ದಾರೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.