ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ‘BAPS ದೇವಾಲಯವು UAEನಲ್ಲಿ ಮೊದಲ ದೇವಾಲಯ'- ಸುಳ್ಳು ಹೇಳಿದ ಕೇಂದ್ರ

ಸುಳ್ಳು ಹೇಳಿದ ಕೇಂದ್ರ ಸರ್ಕಾರ
Published 20 ಫೆಬ್ರುವರಿ 2024, 19:16 IST
Last Updated 20 ಫೆಬ್ರುವರಿ 2024, 19:16 IST
ಅಕ್ಷರ ಗಾತ್ರ

ಫೆಬ್ರುವರಿ 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ಭೇಟಿ ನೀಡಿದ್ದರು. ಬೋಚಾಸನವಾರಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ (ಬಿಎಪಿಎಸ್‌) ದೇವಾಲಯವನ್ನು ಅಂದು ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು. ಯುಎಇನಲ್ಲಿ ನಿರ್ಮಾಣವಾದ ಮೊದಲ ಹಿಂದೂ ದೇವಸ್ಥಾನ ಇದು ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹೇಳಿತು. ಮೊದಲು ಈ ಸಂದೇಶವನ್ನು ಕೇಂದ್ರ ಸಂಸ್ಕೃತಿ ಸಚಿವಾಲಯವು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿತು. ನಂತರದಲ್ಲಿ ಕೇಂದ್ರ ಸರ್ಕಾರದ ಹಲವು ಸಚಿವರು (ಸ್ಮೃತಿ ಇರಾನಿ, ರಾಜ್ಯವರ್ಧನ್‌ ರಾಠೋಡ್‌ ಮುಂತಾದವರು) ಇದೇ ಮಾಹಿತಿಯನ್ನು ತಮ್ಮ ತಮ್ಮ ಖಾತೆಗಳ ಮೂಲಕ ಹಂಚಿಕೊಂಡರು. ಭಾರತದ ಹಲವು ಮಾಧ್ಯಮ ಸಂಸ್ಥೆಗಳೂ (ಪಿಟಿಐ, ಹಿಂದೂಸ್ಥಾನ್‌ ಟೈಮ್ಸ್‌, ಇಂಡಿಯನ್‌ ಎಕ್ಸ್‌ಪ್ರೆಸ್‌, ಮಿಂಟ್‌, ಮಿರರ್‌ ನೌ ಮುಂತಾದವು) ಇದೇ ಮಾಹಿತಿಯನ್ನು ಹಂಚಿಕೊಂಡವು. ‘MyGov’ ವೇದಿಕೆಯಲ್ಲಿಯೂ ಈ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಆದರೆ, ಇದು ಸುಳ್ಳು ಸುದ್ದಿ.

ಬಿಎಪಿಎಸ್‌ ದೇವಾಲಯಕ್ಕೂ ಮುನ್ನ ಯುಎಇನಲ್ಲಿ ಹಲವು ಹಿಂದೂ ದೇವಾಲಯಗಳು ನಿರ್ಮಾಣವಾಗಿದ್ದವು. 1958ರಲ್ಲಿಯೇ ಯುಎಇನಲ್ಲಿ ಕೃಷ್ಣ ದೇವಾಲಯ ನಿರ್ಮಾಣವಾಗಿತ್ತು. ಶೇಕ್‌ ರಶೀದ್‌ ಬಿನ್‌ ಸಯೀದ್‌ ಅಲ್‌ ಮಖ್ತೂಮ್‌ (HH Sheikh Rashid Bin Saeed Al Maktoum) ಎಂಬುವರು ಮಸೀದಿ ಪಕ್ಕದಲ್ಲಿ ಕೃಷ್ಣ ಮಂದಿರ ನಿರ್ಮಾಣ ಮಾಡಲು ಭೂಮಿ ನೀಡಿದ್ದರು. 1997ರಲ್ಲಿ ಈ ದೇವಾಲಯವನ್ನು ನವೀಕರಿಸಲಾಗಿತ್ತು. ಯುಎಇನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿಯೂ ಕೃಷ್ಣ ದೇವಾಲಯದ ವಿವರಗಳಿವೆ. ಬಿಎಪಿಎಸ್‌ ದೇವಾಲಯದವರಿಗೆ ಮೇಲ್‌ ಮಾಡಿ ಕೇಳಲಾಯಿತು. ಅವರು ಸಹ ಇದು ಯುಎಇನಲ್ಲಿ ನಿರ್ಮಾಣವಾದ ಮೊದಲ ದೇವಸ್ಥಾನವಲ್ಲ ಎಂದು ಉತ್ತರಿಸಿದ್ದಾರೆ. ಆದ್ದರಿಂದ, ಯುಎಇನಲ್ಲಿ ಬಿಎಪಿಎಸ್‌ ದೇವಾಲಯವು ಮೊದಲು ನಿರ್ಮಾಣಗೊಂಡ ಹಿಂದೂ ದೇವಾಲಯವಲ್ಲ ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT