ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: P/500 ಮಾತ್ರೆ ಸೇವಿಸಿದರೆ ‘ಮ್ಯಾಚಿಪೊ’ ವೈರಾಣು ರೋಗ ಬರುವುದಿಲ್ಲ

Published 29 ಡಿಸೆಂಬರ್ 2023, 0:29 IST
Last Updated 29 ಡಿಸೆಂಬರ್ 2023, 0:29 IST
ಅಕ್ಷರ ಗಾತ್ರ

‘P/500 ಎಂದು ನಮೂದಿಸಲಾಗಿರುವ ಪ್ಯಾರಸಿಟಾಮಲ್‌ ಮಾತ್ರೆಗಳನ್ನು ಸೇವಿಸಬೇಡಿ. ಚೀನಾವು ಈ ಮಾತ್ರೆಗಳಲ್ಲಿ ‘ಮ್ಯಾಚಿಪೊ’ ವೈರಾಣುವನ್ನು ಸೇರಿಸಿ, ಭಾರತಕ್ಕೆ ರಫ್ತು ಮಾಡುತ್ತಿದೆ. ಈ ಮಾತ್ರೆ ಬಳಸಿದವರಿಗೆ ‘ಮ್ಯಾಚಿಪೊ’ ರೋಗ ಬರುತ್ತದೆ. ಮಾತ್ರೆ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಆ ವ್ಯಕ್ತಿಯ ಮೈಮೇಲೆಲ್ಲಾ ಗಂದೆಗಳು ಏಳುತ್ತವೆ. ತೀವ್ರ ಜ್ವರವೂ ಬರುತ್ತದೆ. ಇದಕ್ಕೆ ಚಿಕಿತ್ಸೆಯೇ ಇಲ್ಲ. ಅಂತಿಮವಾಗಿ ವ್ಯಕ್ತಿ ಸಾಯುತ್ತಾನೆ’ ಎಂಬ ವಿವರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಇದು ಸುಳ್ಳು ಸುದ್ದಿ.

‘P/500 ಎಂದು ನಮೂದಿಸಲಾಗಿರುವ ಪ್ಯಾರಸಿಟಾಮಲ್‌ ಮಾತ್ರೆಗಳಲ್ಲಿ ‘ಮ್ಯಾಚಿಪೊ’ ವೈರಾಣು ಇದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ.  ‘ಮ್ಯಾಚಿಪೊ’ ವೈರಾಣು ಪ್ರಾಣಿಗಳಿಂದ ಮನುಷ್ಯರಿಗೆ ಮತ್ತು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಅದು ಯಾವುದೇ ಅಜೀವ ವಸ್ತುಗಳ ಮೂಲಕ ಹರಡುವುದಿಲ್ಲ. ಹೀಗಾಗಿ ಮಾತ್ರೆಯ ಮೂಲಕವೂ ಅದು ಹರಡುವುದಿಲ್ಲ. ಅಲ್ಲದೆ P/500 ಎಂದು ನಮೂದಿಸಲಾಗಿರುವ ಪ್ಯಾರಸಿಟಾಮಲ್‌ ಮಾತ್ರೆಗಳನ್ನು ಸೇವಿಸಿದ ಕಾರಣಕ್ಕೆ ಗಂದೆಗಳು ಉಂಟಾದ ಮತ್ತು ತೀವ್ರ ಜ್ವರಕ್ಕೆ ತುತ್ತಾದ ಬಗ್ಗೆ ಯಾವುದೇ ವರದಿಗಳಿಲ್ಲ. ಇಂತಹ ಊಹಾಪೋಹಗಳನ್ನು ನಂಬಬಾರದು ಎಂದು ದೆಹಲಿ ಏಮ್ಸ್‌ನ ವೈದ್ಯಾಧಿಕಾರಿಗಳು ಹೇಳಿದ್ದಾರೆ’ ಎಂದು ಹಲವು ಫ್ಯಾಕ್ಟ್‌ಚೆಕ್‌ ವೇದಿಕೆಗಳು ಫ್ಯಾಕ್ಟ್‌ಚೆಕ್‌ ಪ್ರಕಟಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT