ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact check: ನ್ಯಾ. ಚಂದ್ರಚೂಡ್ ಗ್ರೀನ್‌ಕಾರ್ಡ್ ಹೊಂದಿದ್ದಾರೆಯೇ?

Last Updated 10 ಅಕ್ಟೋಬರ್ 2022, 2:14 IST
ಅಕ್ಷರ ಗಾತ್ರ

‘ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರುಅಮೆರಿಕದಲ್ಲಿ ಕಾಯಂ ಆಗಿ ವಾಸಿಸುವ ಹಾಗೂ ಅಲ್ಲಿಯೇ ಕೆಲಸ ಮಾಡಲು ಅವಕಾಶ ಒದಗಿಸುವ ಗ್ರೀನ್‌ಕಾರ್ಡ್ ಹೊಂದಿದ್ದಾರೆ. ಸುಪ್ರೀಂ ಕೋರ್ಟ್‌ನ ಮುಂದಿನ ಸಿಜೆಐ ಹುದ್ದೆ ವಹಿಸಿಕೊಳ್ಳಲಿರುವ ಚಂದ್ರಚೂಡ್ ಅವರ ಈ ನಡೆ ಸ್ವಹಿತಾಸಕ್ತಿಯಿಂದ ಕೂಡಿಲ್ಲವೇ’ ಎಂದು ಇಂದ್ರವಜ್ರ ಎಂಬ ಟ್ವಿಟರ್ ಬಳಕೆದಾರರು ಆಕ್ಷೇಪ ಎತ್ತಿದ್ದಾರೆ. ಪತ್ರಕರ್ತ ರಾಘವ್ ಎಂಬುವರು ತಪ್ಪಾಗಿ ಅರ್ಥೈಸಿ ಮಾಡಿದ್ದ ಟ್ವೀಟ್‌ ಸಹ ಇದಕ್ಕೆ ಪುಷ್ಠಿ ನೀಡುವಂತಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಲೇಖಕ ರಾಜೀವ್ ಮಲ್ಹೋತ್ರಾ ಎಂಬುವರು ಚಂದ್ರಚೂಡ್ ವಿರುದ್ಧ ಇನ್ನಷ್ಟು ಆರೋಪಗಳನ್ನು ಮಾಡಿದ್ದಾರೆ. ಜೊತೆಗೆ ಆರ್‌ಕೆ ಪಠಾಣ್ ಎಂಬುವರು ಚಂದ್ರಚೂಡ್ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಿದ್ದಾರೆ ಎನ್ನಲಾದ ಪ್ರತಿ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ.

ನ್ಯಾಯಮೂರ್ತಿ ಚಂದ್ರಚೂಡ್ ಅವರು ನವೆಂಬರ್ 8ರಂದು ಸುಪ್ರೀಂಕೋರ್ಟ್‌ನ ನೂತನ ಮುಖ್ಯನ್ಯಾಯಮೂರ್ತಿಯಾಗಿ (ಸಿಜೆಐ) ನೇಮಕವಾಗಲಿದ್ದಾರೆ. ಹೀಗಾಗಿ ಅವರ ವಿರುದ್ಧ ಇಲ್ಲಸಲ್ಲದ ಟೀಕೆಗಳು ಹಾಗೂ ಆರೋಪಗಳು ಕೇಳಿಬರುತ್ತಿವೆ ಎಂದು ‘ಬಾರ್ ಅಂಡ್ ಬೆಂಚ್’ ಜಾಲತಾಣ ಅಭಿಪ್ರಾಯಪಟ್ಟಿದೆ. ಚಂದ್ರಚೂಡ್ ಅವರು ಅಮೆರಿಕದ ಗ್ರೀನ್‌ಕಾರ್ಡ್ ಹೊಂದಿಲ್ಲ, ಇದು ತಪ್ಪು ಮಾಹಿತಿ ಎಂದು ಸ್ಪಷ್ಟಪಡಿಸಿದೆ.ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನ ಅರ್ಜಿದಾರರ ಸಂಘದ ಅಧ್ಯಕ್ಷ ಎಂದು ಹೇಳಿಕೊಂಡಿರುವ ಪಠಾಣ್ ಅವರು ಚಂದ್ರಚೂಡ್ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪ ಆಧಾರರಹಿತ ಎಂದು ತಿಳಿಸಿದೆ. 164 ಪುಟಗಳ ದೂರಿನಲ್ಲಿ ಯಾವುದೇ ನಂಬಲರ್ಹ ಅಂಶಗಳು ಇಲ್ಲ ಎಂದು ಬಾರ್ ಕೌನ್ಸಿಲ್ ಅಧ್ಯಕ್ಷ ಮೋಹನ್ ಕುಮಾರ್ ಮಿಶ್ರಾ ಹೇಳಿದ್ದಾರೆ. ಸಿಜೆಐ ಆಗಲಿರುವ ಚಂದ್ರಚೂಡ್‌ ಅವರಿಗೆ ಮುಜುಗರ ಉಂಟುಮಾಡಲು ಮಾಡಿರುವ ಯತ್ನವಿದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT