ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್ ಚೆಕ್: ಮಮತಾ ಸೋಲಿನ ಸಮೀಕ್ಷೆ ವೈರಲ್!

Last Updated 1 ಏಪ್ರಿಲ್ 2021, 18:05 IST
ಅಕ್ಷರ ಗಾತ್ರ

ತೀವ್ರ ಜಿದ್ದಾಜಿದ್ದಿಯಿಂದ ಕೂಡಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಜಯ ದೊರೆಯಲಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಎಂಟು ಹಂತಗಳ ಮತದಾನದಲ್ಲಿ ಈಗ ಎರಡು ಹಂತಗಳು ಮುಗಿದಿವೆ. ಪ್ರಶಾಂತ್ ಕಿಶೋರ್ ಅವರ ಐಪ್ಯಾಕ್ ಸಂಸ್ಥೆಯು ನಡೆಸಿದೆ ಎನ್ನಲಾದ ಸಮೀಕ್ಷೆಯ ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಶಾಂತ್ ಅವರು ಮಮತಾ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸಮೀಕ್ಷೆಯ ಪ್ರಕಾರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಬಾರಿ ಸೋಲೊಪ್ಪಲಿದ್ದಾರೆ. ಈ ವಿವರಗಳನ್ನು ಹಲವರು ಹಂಚಿಕೊಂಡಿದ್ದಾರೆ. ‘ಕಿಶೋರ್ ಅವರ ಆಂತರಿಕ ಸಮೀಕ್ಷೆ ಸೋರಿಕೆಯಾಗಿದ್ದು, ಮಮತಾ ಸೋಲಲಿದ್ದಾರೆ’ ಎಂದು ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆಯು ಪರಿಶೀಲನೆ ನಡೆಸಿದಾಗ, ಸಮೀಕ್ಷೆಯು ನಕಲಿ ಎಂಬುದು ಕಂಡುಬಂದಿದೆ. ತೃಣಮೂಲ ಕಾಂಗ್ರೆಸ್ ಪಕ್ಷವು ಹೆಚ್ಚಾಗಿ ಟಿಎಂಸಿ ಎಂದು ಉಲ್ಲೇಖಿಸುತ್ತದೆ. ಆದರೆ ಸಮೀಕ್ಷೆಯಲ್ಲಿ ಎಐಟಿಸಿ ಎಂದು ಉಲ್ಲೇಖಿಸಲಾಗಿದೆ. ಐಪ್ಯಾಕ್ ಸಂಸ್ಥೆ ಸಹ ಸಮೀಕ್ಷೆಯನ್ನು ನಕಲಿ ಎಂದು ಖಚಿತಪಡಿಸಿದೆ. ಹತಾಶೆಯಲ್ಲಿರುವ ಬಿಜೆಪಿಯು ನಕಲಿ ಸಮೀಕ್ಷೆ ಮೂಲಕ ಜನರ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದೆ. ಇದು ಬಿಜೆಪಿಯ ವ್ಯವಸ್ಥಿತ ಷಡ್ಯಂತ್ರ ಎಂದು ಟಿಎಂಸಿ ಖಂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT