ಯು ಟ್ಯೂಬ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಕುಮಾರಿ ಸೆಲ್ಜಾ ಅವರು, ಬಿಜೆಪಿಯು ವಿವಿಧ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದ ಬಗ್ಗೆ ಮಾತನಾಡುತ್ತಾ, ‘ನೀವು ಆ ಯೋಜನೆಗಳು ಎಷ್ಟರ ಮಟ್ಟಿಗೆ ಪೂರ್ಣಗೊಂಡಿವೆ ಎನ್ನುವುದನ್ನು ನೋಡಬೇಕು. ರಾಮಮಂದಿರವನ್ನೂ ಅವರು ಬಿಡಲಿಲ್ಲ. ಅರ್ಧದಲ್ಲಿಯೇ ಉದ್ಘಾಟನೆ ನೆರವೇರಿಸಿದರು. ಮಳೆಗಾಲದಲ್ಲಿ ರಾಮ ತೊಟ್ಟಿಕ್ಕುತ್ತಾನೆ’ ಎಂದು ಹೇಳಿದ್ದರು. ಈ ಬಗ್ಗೆ ಕೀವರ್ಡ್ ಸರ್ಚ್ ಮಾಡಿದಾಗ, ಹರಿಯಾಣದಲ್ಲಿ ‘ರಾಮ’ ಎನ್ನುವ ಪದಕ್ಕೆ ಹಲವು ಅರ್ಥಗಳಿದ್ದು, ಮಳೆ ಎಂಬುದು ಕೂಡ ಒಂದು ಅರ್ಥವಾಗಿದೆ. ಕುಮಾರಿ ಸೆಲ್ಜಾ ಅವರ ಮಾತುಗಳನ್ನು ಸಂದರ್ಭದಿಂದ ಪ್ರತ್ಯೇಕಿಸಿ, ಅವರು ರಾಮನಿಗೆ ಅವಮಾನ ಮಾಡಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಈ ಬಗ್ಗೆ ‘ಆಲ್ಟ್ ನ್ಯೂಸ್’ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.