‘ಕಾಂಗ್ರೆಸ್ ಆರಂಭದ ದಿನದಿಂದಲೂ ಮುಸ್ಲಿಮರನ್ನು ಓಲೈಸುತ್ತಿತ್ತು. ಈಗಲೂ ಮುಸ್ಲಿಮರನ್ನು ಓಲೈಸುತ್ತಿದೆ. 1982ರ ಏಷ್ಯನ್ ಗೇಮ್ಸ್ ವೇಳೆ ಇಂದಿರಾ ಗಾಂಧಿ ಸರ್ಕಾರವು ಏಷ್ಯನ್ ಗೇಮ್ಸ್‌ನ ಅಂಚೆಚೀಟಿಯನ್ನು ಬಿಡುಗಡೆ ಮಾಡಿತ್ತು. ಗಡ್ಡಧಾರಿ ಮುಸ್ಲಿಂ ಕುಸ್ತಿಪಟು, ಜುಟ್ಟು ಇರುವ ಬ್ರಾಹ್ಮಣ ಕುಸ್ತಿಪಟುವನ್ನು ಎತ್ತಿ ಒಗೆಯುತ್ತಿರುವ ಚಿತ್ರವನ್ನು ಅಂಚೆಚೀಟಿಯಲ್ಲಿ ಬಳಸಲಾಗಿತ್ತು. ಮುಸ್ಲಿಂ ಕುಸ್ತಿಪಟು, ಬ್ರಾಹ್ಮಣ ಕುಸ್ತಿಪಟುವನ್ನು ಸೋಲಿಸುತ್ತಿರುವಂತಹ ಚಿತ್ರವನ್ನು ಬಳಸಿ ಇಂದಿರಾ ಗಾಂಧಿ ಸರ್ಕಾರವು ಮುಸ್ಲಿಮರನ್ನು ಓಲೈಕೆ ಮಾಡಿತ್ತು. ಹಿಂದೂಗಳಿಗೆ ಅವಮಾನ ಮಾಡಿತ್ತು’ ಎಂಬ ಟ್ವೀಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದೇ ರೀತಿಯ ಬರಹ ಇರುವ ಟ್ವೀಟ್‌ಗಳನ್ನು ಹಲವರು ಟ್ವೀಟ್ ಮಾಡಿದ್ದಾರೆ. ಅಂಚೆಚೀಟಿಯ ಚಿತ್ರವನ್ನೂ ಹಂಚಿಕೊಂಡಿದ್ದಾರೆ.