ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ ಚೆಕ್‌: ರಾಜಸ್ಥಾನದಲ್ಲಿ ಪಾಕಿಸ್ತಾನ ಪರ ಘೋಷಣೆ?

Last Updated 19 ಮೇ 2022, 19:30 IST
ಅಕ್ಷರ ಗಾತ್ರ

ರಾಜಸ್ಥಾನದ ಭೀಲವಾಡದಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಲಾಗಿದೆ. ಸುಭಾಷ್‌ ನಗರ ಪೊಲೀಸ್‌ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿ ಮೊಕದ್ದಮೆ ದಾಖಲಿಸಲಾಗಿದೆ ಎಂಬ ವರದಿಯನ್ನು ಪ್ರಮುಖ ಪತ್ರಿಕೆಯೊಂದು ತನ್ನ ವೆಬ್‌ ಪೋರ್ಟಲ್‌ನಲ್ಲಿ ಪ್ರಕಟಿಸಿದೆ. 40 ಸೆಕೆಂಡುಗಳ ವಿಡಿಯೊವನ್ನೂ ವರದಿ ಜೊತೆ ಪೋಸ್ಟ್‌ ಮಾಡಿದೆ. ಬಿಜೆಪಿಯ ಹಲವು ಮುಖಂಡರು ಈ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಂಗನೆರ್‌ ಪ್ರದೇಶದಲ್ಲಿ ಈದ್‌ ಆಚರಣೆಯಂದು ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಲಾಗಿದೆ ಎಂಬ ವಿವರಣೆ ವಿಡಿಯೊ ಜೊತೆ ಇದೆ.

ಈ ವಿಡಿಯೊದಲ್ಲಿ ಕೇಳುವುದು ಪಾಕಿಸ್ತಾನ ಪರ ಘೋಷಣೆಯಲ್ಲ ಬದಲಾಗಿ ‘ಎಸ್‌ಡಿಪಿಐ ಜಿಂದಾಬಾದ್‌’ ಎಂಬ ಘೋಷಣೆ ಎಂದು ಆಲ್ಟ್‌ನ್ಯೂಸ್‌ ವೇದಿಕೆ ವರದಿ ಮಾಡಿದೆ. ಈ ವಿಡಿಯೊ ಸೆರೆ ಆಗಿರುವುದು 2021ರ ಫೆಬ್ರುವರಿ 17ರಂದು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿ ನಾಥುಲಾಲ್‌ ರಾವ್‌ ಎಂಬುವವರು ಗೆದ್ದಿದ್ದರು. ಆ ವೇಳೆ ಎಸ್‌ಡಿಪಿಐ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದರು. ವೈರಲ್‌ ಆಗಿರುವ ವಿಡಿಯೊದಲ್ಲಿ ಪೊಲೀಸರು ಇರುವುದೂ ಕಾಣುತ್ತದೆ. ‘ನಾನು ಸ್ಥಳದಲ್ಲೇ ಇದ್ದೆ. ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಲಾಗಿಲ್ಲ’ ಎಂದು ಸ್ವತಃ ನಾಥುಲಾಲ್‌ ಅವರೇ ಆಲ್ಟ್‌ನ್ಯೂಸ್‌ಗೆ ಹೇಳಿದ್ದಾರೆ ಎಂದು ಆಲ್ಟ್‌ನ್ಯೂಸ್‌ ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT