ಜಾಗತಿಕ ಭಯೋತ್ಪಾದಕ ಸೂಚ್ಯಂಕದಲ್ಲಿ ಹೆಸರಿಸಲಾಗಿರುವ ಅಪಾಯಕಾರಿ 20 ಉಗ್ರ ಸಂಘಟನೆಗಳಲ್ಲಿ ಕಮ್ಯೂನಿಸ್ಟ್ ಫಾರ್ಟಿ ಆಫ್ ಇಂಡಿಯಾ (ಸಿಪಿಐ) ಹೆಸರಿದೆ ಎಂದು ಹೇಳಲಾಗುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ‘ಇನ್‌ಸ್ಟಿಟ್ಯೂಟ್ ಆಫ್ ಇಕನಾಮಿಕ್ಸ್ ಆ್ಯಂಡ್ ಪೀಸ್ (ಐಇಪಿ) ಬಿಡುಗಡೆ ಮಾಡಿರುವ ವರದಿಯಲ್ಲಿ ಸಿಪಿಐ 12ನೇ ಸ್ಥಾನ ಪಡೆದಿದೆ’ ಎಂದು ಫೇಸ್‌ಬುಕ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಕೆಲವು ಟ್ವಿಟರ್ ಖಾತೆಗಳಲ್ಲೂ ಉಗ್ರ ಸಂಘಟನೆಗಳ ಪಟ್ಟಿಯನ್ನು ತೋರಿಸುವ ಚಿತ್ರ ಹಂಚಿಕೆಯಾಗಿದೆ. ಆದರೆ ಇದು ತಪ್ಪು ಮಾಹಿತಿ.

ಇನ್‌ಸ್ಟಿಟ್ಯೂಟ್ ಆಫ್ ಇಕನಾಮಿಕ್ಸ್ ಆ್ಯಂಡ್ ಪೀಸ್ ಬಿಡುಗಡೆ ಮಾಡಿದ್ದ ಮೊದಲ ವರದಿಯಲ್ಲಿ ಸಿಪಿಐ (ಮಾವೋವಾದಿ) ಎಂದು ಉಲ್ಲೇಖಿಸುವ ಬದಲು ಸಿಪಿಐ ಎಂದು ತಪ್ಪಾಗಿ ಉಲ್ಲೇಖಿಸಲಾಗಿತ್ತು ಎಂದು ಪಿಟಿಐ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ವರದಿಯಲ್ಲಿ ಆಗಿರುವ ಲೋಪವನ್ನು ತಕ್ಷಣ ಸರಿಪಡಿಸಿದ ಸಂಸ್ಥೆಯು, ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಿಪಿಐ ಬದಲಾಗಿ ಸಿಪಿಐ (ಮಾವೋವಾದಿ) ಎಂದು ಸರಿಪಡಿಸಿ ಪ್ರಕಟಿಸಿದ್ದು, ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿದೆ. ಸಿಪಿಐ (ಮಾವೋವಾದಿ) ಹಾಗೂ ಅದರ ಅಂಗ ಸಂಸ್ಥೆಗಳನ್ನು ಯುಎಪಿಎ ಅಡಿ ನಿಷೇಧಿತ ಉಗ್ರ ಸಂಘಟನೆಗಳು ಎಂದು ಗುರುತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.