ನಾಗಪುರದ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ದಾಖಲಾಗಿದ್ದ, ಆರ್‌ಎಸ್‌ಎಸ್‌ನ ಸ್ವಯಂಸೇವಕ85 ವರ್ಷದ ನಾರಾಯಣ ದಭಾಡ್ಕರ್ ಅವರು ಬೇರೆ ವ್ಯಕ್ತಿಗೆ ಹಾಸಿಗೆ ಬಿಟ್ಟುಕೊಟ್ಟಿದ್ದರು. 40 ವರ್ಷದ ಕೋವಿಡ್ ರೋಗಿಯೊಬ್ಬರಿಗೆ ಹಾಸಿಗೆ ಸಿಗದ ಕಾರಣ, ಆ ವ್ಯಕ್ತಿಯ ಪತ್ನಿ ಆಸ್ಪತ್ರೆ ಸಿಬ್ಬಂದಿಯನ್ನು ಅಂಗಲಾಚುತ್ತಿದ್ದರು. ಅದನ್ನು ನೋಡಿ ನಾರಾಯಣ ತನ್ನ ಹಾಸಿಗೆ ಬಿಟ್ಟುಕೊಟ್ಟಿದ್ದರು. ಹಾಸಿಗೆ ಬಿಟ್ಟುಕೊಟ್ಟ ನಾಲ್ಕೇ ದಿನದಲ್ಲಿ ನಾರಾಯಣ ಮೃತರಾದರು ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಇದು ವೈರಲ್ ಸಹ ಆಗಿತ್ತು.

ಆದರೆ, ಇದು ಸುಳ್ಳು ಸುದ್ದಿ ಎಂದು ಇಂದಿರಾ ಗಾಂಧಿ ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ. ನಾರಾಯಣ ಅವರು ಗುಣಮುಖರಾದ ನಂತರ ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು. ಅವರು ಮನೆಗೆ ಹೋದ ದಿನ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ. ಅಲ್ಲದೆ ಅಂದು ಕೋವಿಡ್ ರೋಗಿಗಳಿಗೆಂದು ಮೀಸಲಿರಿಸಿದ್ದ ಹಾಸಿಗೆಗಳಲ್ಲಿ, ನಾಲ್ಕು ಹಾಸಿಗೆಗಳು ಖಾಲಿಯೇ ಇದ್ದವು. ವೈರಲ್ ಆಗಿರುವ ಸುದ್ದಿಯಲ್ಲಿ ಇರುವ ಮಾಹಿತಿ ಸುಳ್ಳು ಎಂದು ಆಸ್ಪತ್ರೆಯು ಪ್ರಕಟಣೆ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.