ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಇಸ್ರೇಲ್‌ ಕ್ರೂರಿ ಎಂದು ತೋರಿಸಲು ಪ್ಯಾಲೆಸ್ಟೇನರು ನಾಟಕವಾಡುತ್ತಿಲ್ಲ

Fact Check: ಇಸ್ರೇಲ್‌ ಕ್ರೂರಿ ಎಂದು ತೋರಿಸಲು ಪ್ಯಾಲೆಸ್ಟೇನ್‌ ಜನರು ನಾಟಕವಾಡುತ್ತಿಲ್ಲ
Published 17 ಅಕ್ಟೋಬರ್ 2023, 18:35 IST
Last Updated 17 ಅಕ್ಟೋಬರ್ 2023, 18:35 IST
ಅಕ್ಷರ ಗಾತ್ರ

‘ಗಾಜಾ ಜನರು ಸತ್ಯವನ್ನು ತಿರುಚುವ ಹೊಸ ಮಾದರಿಯೊಂದನ್ನು ಕಂಡುಕೊಂಡಿದ್ದಾರೆ. ಸುಳ್ಳು ಗಾಯಗಳನ್ನು ಮಾಡಿಕೊಂಡು, ಅದರಿಂದ ರಕ್ತ ಬರುವಂತೆ ತೋರಿಸುತ್ತಿದ್ದಾರೆ. ತಾವು ಎಷ್ಟು ಮುಗ್ಧರು, ಬಲಿಪಶುಗಳು ಹಾಗೂ ಇಸ್ರೇಲ್‌ ಎಷ್ಟು ಕ್ರೂರ ಎಂದು ಜಗತ್ತಿನ ಎದುರಿಗೆ ತೋರಿಸಲು ಗಾಜಾ ಜನರು ಈ ರೀತಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಇಸ್ಲಾಂನ ಬಲಿಪಶುಗಳ ವಿಶ್ವವಿದ್ಯಾಲಯಕ್ಕೆ ಸ್ವಾಗತ’ ಎಂದು ಈ ವಿಡಿಯೊದೊಂದಿಗೆ ಕೆಲವರು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಮಕ್ಕಳಿಂದ ಹಿಡಿದು ಮಧ್ಯ ವಯಸ್ಸಿನ ಜನರ ಮುಖ, ಮೈ ಮೇಲೆ ಕೆಂಪು ಬಣ್ಣ ಬಳಿಯುತ್ತಿರುವ, ಗಾಯಗಳಾಗಿರುವ, ಕಾಲು ಕತ್ತರಿಸಿ ಹೋಗಿರುವಂತೆ ತೋರಿಸುತ್ತಿರುವ ದೃಶ್ಯಗಳು ಈ ವಿಡಿಯೊದಲ್ಲಿ ಇವೆ. ಆದರೆ, ಇದು ಸುಳ್ಳು ಸುದ್ದಿ.

ಗಾಜಾದ ಸಿನಿಮಾ ಉದ್ಯಮದ ಮಹಿಳಾ ಪ್ರಸಾದನ ಕಲಾವಿದೆ ಮರಿಯಮ್‌ ಸಾಲೇಹ್‌ ಅವರ ಪ್ರಸಾದನ ಕಲೆಯ ಅನಾವರಣದ ವಿಡಿಯೊ ಇದಾಗಿದೆ. ಸ್ಪೆಷಲ್‌ ಎಫೆಕ್ಟ್‌ನ ಪ್ರಸಾದನ ಕಲೆಯಲ್ಲಿ ಇವರು ನಿಷ್ಣಾತರು. ಇವರ ಬಗ್ಗೆ ‘ಟಿಆರ್‌ಟಿ ವರ್ಲ್ಡ್‌’ ಎನ್ನುವ ಸುದ್ದಿ ಸಂಸ್ಥೆ ವಿಡಿಯೊ ಸುದ್ದಿಯನ್ನು 2019ರ ಮಾರ್ಚ್‌ 2ರಂದು ಪ್ರಸಾರ ಮಾಡಿದೆ. ಪುರುಷರೇ ಆಧಿಪತ್ಯಗಳಿಸಿರುವ ಗಾಜಾ ಸಿನಿಮಾ ಕ್ಷೇತ್ರದ ಜೊತೆಯಲ್ಲಿಯೇ ಮರಿಯಮ್‌ ಅವರ ಸಾಧನೆಯನ್ನು ವಿವರಿಸುವ ವಿಡಿಯೊ ಅದಾಗಿದೆ. 2021ರಲ್ಲಿ ಇಸ್ರೇಲ್–ಪ್ಯಾಲೆಸ್ಟೀನ್‌ ನಡುವೆ ಯುದ್ಧ ನಡೆದಾಗ ಕೂಡ ಇದೇ ವಿಡಿಯೊದ ಬೇರೆ ಬೇರೆ ತುಣುಕುಗಳು ಇದೇ ರೀತಿಯ ಆರೋಪಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಆದ್ದರಿಂದ, ಇದು ಪ್ಯಾಲೆಸ್ಟೀನ್‌ ಜನರು ಇಸ್ರೇಲ್‌ನ ಕ್ರೂರತನವನ್ನು ತೋರಿಸಲು ಮಾಡುತ್ತಿರುವ ಪ್ರಯತ್ನ ಅಲ್ಲ ಎಂದು ‘ದಿ ಕ್ವಿಂಟ್‌’ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT