ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಅನಾಹುತ ಸೃಷ್ಟಿಸಿರುವ ಕಾಳ್ಗಿಚ್ಚಿಗೆ ಸಂಬಂಧಿಸಿದಂತೆ ವಿಡಿಯೊ ತುಣುಕೊಂದನ್ನು ಎಕ್ಸ್, ಫೇಸ್ಬುಕ್ನಲ್ಲಿ ಹಲವರು ಹಂಚಿಕೊಳ್ಳುತ್ತಿದ್ದಾರೆ. ರಸ್ತೆಯ ಹಿನ್ನೆಲೆಯಲ್ಲಿ ದೊಡ್ಡ ಬೆಟ್ಟ ಧಗ ಧಗನೆ ಉರಿಯುವ, ಹೊತ್ತಿ ಉರಿಯುತ್ತಿರುವ ಪ್ರದೇಶದ ವೈಮಾನಿಕ ನೋಟದ ದೃಶ್ಯಾವಳಿ ಆ ತುಣುಕಿನಲ್ಲಿದೆ. ಆದರೆ. ಇದು ನೈಜ ವಿಡಿಯೊ ಅಲ್ಲ.

ವಿಡಿಯೊ ತುಣುಕನ್ನು ಇನ್ವಿಡ್ ಟೂಲ್ ಸರ್ಚ್ನಲ್ಲಿ ಹಾಕಿದಾಗ ಹಲವು ಕೀಫ್ರೇಮ್ಗಳು ಕಂಡು ಬಂದವು. ಒಂದು ಫ್ರೇಮ್ ಅನ್ನು ಗೂಗಲ್ ಲೆನ್ಸ್ನಲ್ಲಿ ಹಾಕಿ ಹುಡುಕಿದಾಗ, ಹಲವರು ಇದೇ ವಿಡಿಯೊವನ್ನು ಪೋಸ್ಟ್ ಮಾಡಿರುವುದು ಕಂಡು ಬಂತು. ವಿವಿಧ ಕೋನಗಳಲ್ಲಿ ಸೆರೆ ಹಿಡಿದಂತೆ ಕಾಣುವ ವಿಡಿಯೊ ಕ್ಲಿಪ್ಗಳನ್ನು ಬಳಸಿ ವಿಡಿಯೊ ಸಿದ್ಧಪಡಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದ ವಿಡಿಯೊಕ್ಕೆ ಪ್ರತಿಕ್ರಿಯೆ ನೀಡಿದವರಲ್ಲಿ ಕೆಲವರು, ಇದು ಕೃತಕ ಬುದ್ಧಿಮತ್ತೆಯ ವಿಡಿಯೊ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಇದರ ಆಧಾರದಲ್ಲಿ, ವಿಡಿಯೊದ ಕೆಲವು ಕೀಫ್ರೇಮ್ಗಳನ್ನು ಕೃತಕ ಬುದ್ಧಿಮತ್ತೆಯಿಂದ ತಯಾರಿಸಿದ ಚಿತ್ರ, ವಿಡಿಯೊಗಳನ್ನು ಪತ್ತೆ ಮಾಡುವ ವಾಸಿಟೈ ಟೂಲ್ನಲ್ಲಿ ಹಾಕಿದಾಗ, ವಿಡಿಯೊ ತುಣುಕಿನಲ್ಲಿ ಎಐ ತಂತ್ರಜ್ಞಾನದಲ್ಲಿ ಸೃಷ್ಟಿಸಿದ ದೀಪ್ಫೇಕ್ ವಿಡಿಯೊ ಕ್ಲಿಪ್ಗಳು ಇರುವುದು ದೃಢಪಟ್ಟಿತು. ಇನ್ನುಳಿದ ಕೀಫ್ರೇಮ್ಗಳನ್ನು ಮತ್ತೊಂದು ಎಐ ಪತ್ತೆ ಟೂಲ್ ಹೈವ್ ಮಾಡರೇಷನ್ನಲ್ಲಿ ಹಾಕಿದಾಗ, ಇದು ನಕಲಿ ವಿಡಿಯೊ ಎಂದು ತೋರಿಸಿತು. ಹಾಗಾಗಿ, ಕಾಳ್ಗಿಚ್ಚಿಗೆ ಸಂಬಂಧಿಸಿದ ವಿಡಿಯೊ ವಾಸ್ತವದ್ದಲ್ಲ, ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿದ ವಿಡಿಯೊ ಎಂದು ಪಿಟಿಐ ಫ್ಯಾಕ್ಟ್ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.