ಬುಧವಾರ, 28 ಫೆಬ್ರುವರಿ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಕೊಹ್ಲಿ ತಾಯಿಯ ಆರೋಗ್ಯದ ಬಗ್ಗೆ ಪಾಕ್ ಖಾತೆಗಳಿಂದ ಸುಳ್ಳು ಸುದ್ದಿ

Published 4 ಫೆಬ್ರುವರಿ 2024, 9:48 IST
Last Updated 4 ಫೆಬ್ರುವರಿ 2024, 9:48 IST
ಅಕ್ಷರ ಗಾತ್ರ

ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮುಖಭಂಗ ಅನುಭವಿಸಿದೆ. ಇದರ ಬೆನ್ನಲ್ಲೇ ರೋಹಿತ್‌ ಶರ್ಮಾ ನಾಯಕತ್ವದ ಬಗ್ಗೆ ಟೀಕೆಗಳು ಕೇಳಿಬಂದಿವೆ. ರೋಹಿತ್‌ ಬದಲು ವಿರಾಟ್‌ ಕೊಹ್ಲಿ ತಂಡ ಮುನ್ನಡೆಸಿದ್ದರೆ, ಫಲಿತಾಂಶ ಬೇರೆಯೇ ಇರುತ್ತಿತ್ತು ಎಂದು ಹಲವು ಮಾಜಿ ಆಟಗಾರರು ಅಭಿಪ್ರಾಯ ಪಟ್ಟಿದ್ದಾರೆ.

ವೈಯಕ್ತಿಕ ಕಾರಣದಿಂದ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿರುವ ಕೊಹ್ಲಿ, ಉಳಿದ ಪಂದ್ಯಗಳಿಗಾದರೂ ಲಭ್ಯವಾಗುವರೇ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಈ ನಡುವೆ, ಅವರ ತಾಯಿ ಅನಾರೋಗ್ಯಕ್ಕೊಳಗಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಫೇಸ್‌ಬುಕ್‌ ಹಾಗೂ ಟ್ವಿಟರ್‌ನ ಹಲವು ಪುಟಗಳಲ್ಲಿ, 'ವಿರಾಟ್‌ ಅವರ ತಾಯಿ ಯಕೃತ್ತು ಸಂಬಂಧಿ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ತಿಳಿಯಿತು. ವಿರಾಟ್‌ ತಾಯಿಯ ಆರೋಗ್ಯ ಸುಧಾರಣೆಯಾಗಲಿ ಎಂದು ಪ್ರಾರ್ಥಿಸುತ್ತೇನೆ. ತಂದೆ–ತಾಯಿಗಳು ಅನಾರೋಗ್ಯಕ್ಕೊಳಗಾದರೆ, ಎಂದೂ ಅನುಭವಿಸದಷ್ಟು ನೋವಾಗುತ್ತದೆ. ನಿಜವಾಗಿಯೂ ಇದು ಕೊಹ್ಲಿ ಪಾಲಿಗೆ ಕಠಿಣ ಸಮಯ. ನಮ್ಮ ಪ್ರಾರ್ಥನೆಗಳು ಅವರೊಂದಿಗೆ ಇರಲಿವೆ. ಅವರು ಶೀಘ್ರವೇ ಚೇತರಿಸಿಕೊಳ್ಳುವ ವಿಶ್ವಾಸವಿದೆ. ಕುಟುಂಬ ಎಲ್ಲಕ್ಕೂ ಮಿಗಿಲು. 5 ಟೆಸ್ಟ್‌ ಪಂದ್ಯಗಳನ್ನು ತಪ್ಪಿಸಿಕೊಂಡರೂ, ಕೊಹ್ಲಿ ತಮ್ಮ ತಾಯಿ ಸರೋಜ್‌ ಅವರೊಂದಿಗೆ ಇರಲಿದ್ದಾರೆ ಎಂಬ ನಂಬಿಕೆ ಇದೆ' ಎಂದು ಬರೆಯಲಾಗಿದೆ.

ಈ ಸುದ್ದಿಯನ್ನು ಸಾಕಷ್ಟು ಜನರು ಹಂಚಿಕೊಂಡಿದ್ದಾರೆ. ಕೊಹ್ಲಿ ತಾಯಿಯ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ.

ಆದರೆ, ಇದು ನಿಜವಲ್ಲ. ಈ ಬಗ್ಗೆ 'ಇಂಡಿಯಾ ಟುಡೇ' ಸೇರಿದಂತೆ ಹಲವು ಸುದ್ದಿ ಸಂಸ್ಥೆಗಳು ಫ್ಯಾಕ್ಟ್‌ಚೆಕ್‌ ಮಾಡಿವೆ.

ಕೊಹ್ಲಿ ಅವರ ಸಹೋದರ ವಿಕಾಸ್‌ ಅವರು ವದಂತಿಗಳಿಗೆ ತೆರೆ ಎಳೆಯುವ ಹಾಗೂ ತಾಯಿಯ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡುವ ಸಲುವಾಗಿ ಜನವರಿ 31ರಂದು ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

'ಎಲ್ಲರಿಗೂ ನಮಸ್ಕಾರ. ನಮ್ಮ ತಾಯಿಯ ಆರೋಗ್ಯದ ಕುರಿತಂತೆ ಸುಳ್ಳು ಸುದ್ದಿ ಹರಿದಾಡುತ್ತಿರುವುದನ್ನು ಗಮನಿಸಿದ್ದೇನೆ. ನಮ್ಮ ತಾಯಿ ಸಂಪೂರ್ಣ ಆರೋಗ್ಯವಾಗಿದ್ದಾರೆ. ಸರಿಯಾದ ಮಾಹಿತಿ ಇಲ್ಲದೆ, ಇಂತಹ ಸುದ್ದಿಗಳನ್ನು ಹರಡದಿರಿ ಎಂದು ಮಾಧ್ಯಮಗಳೂ ಸೇರಿದಂತೆ ಪ್ರತಿಯೊಬ್ಬರಿಗೂ ಮನವಿ ಮಾಡುತ್ತೇನೆ. ಕಾಳಜಿ ತೋರಿದ ಎಲ್ಲರಿಗೂ ಧನ್ಯವಾದ' ಎಂದು ಬರೆದಿದ್ದಾರೆ.

ಇದರ ಆಧಾರದಲ್ಲಿ ವರದಿಗಳು ಪ್ರಕಟವಾಗಿವೆ.

ಪಾಕ್‌ ಮೂಲದ ಖಾತೆಗಳು
ಈ ರೀತಿಯ ಸುಳ್ಳು ಸುದ್ದಿ ಹರಿಬಿಟ್ಟು ಗೊಂದಲ ಸೃಷ್ಟಿಸುತ್ತಿರುವ ಖಾತೆಗಳು ಪಾಕಿಸ್ತಾನ ಮೂಲದವು. ಪಾಕ್‌ ಕ್ರಿಕೆಟಿಗ ಬಾಬರ್‌ ಅಜಂ ಹೆಸರಿನಲ್ಲಿ ಸೃಜಿಸಲಾಗಿರುವ 'Babar Azam Army', 'The Babarians Army' ಖಾತೆಗಳ ಸಂಪರ್ಕವನ್ನು ಪರಿಶೀಲಿಸಿದಾಗ ಮುಲ್ತಾನ್‌, ‍ಪೇಶಾವರ ವಿಳಾಸ ಉಲ್ಲೇಖಿಸಿರುವುದು ಕಂಡುಬಂದಿದೆ. 'Talha Riaz' ಎಂಬ ಎಕ್ಸ್‌ ಖಾತೆಯಲ್ಲಿ ಪಾಕ್‌ ಕ್ರಿಕೆಟ್‌ ಪತ್ರಕರ್ತ ಎಂಬ ಮಾಹಿತಿ ಇದೆ.

ವಿವಿಧ ಖಾತೆಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT