ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ದೆಹಲಿ ಎಎಸ್‌ಐ ದಯಾಳ್ ಮೇಲೆ ಹಲ್ಲೆ ನಡೆಸಿದ್ದು ಮುಸ್ಲಿಂ ವ್ಯಕ್ತಿಯೇ?

Last Updated 11 ಜನವರಿ 2023, 19:30 IST
ಅಕ್ಷರ ಗಾತ್ರ

ಕಳ್ಳನೊಬ್ಬನ ಚಾಕು ಇರಿತದ ಕಾರಣ ದೆಹಲಿ ಪೊಲೀಸ್‌ ಎಎಸ್‌ಐ ಶಂಭು ದಯಾಳ್‌ ಎಂಬುವವರು ಮೃತಪಟ್ಟಿದ್ದಾರೆ. ‘ಜಿಹಾದಿ ಮೊಹಮ್ಮದ್ ಅನೀಶ್ ಎಂಬುವವನು ಶಂಭು ದಯಾಳ್ ಅವರ ಮೇಲೆ ದಾಳಿ ನಡೆಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ದಯಾಳ್‌ ಅವರಿಗೆ ದೆಹಲಿಯ ಬಿಎಲ್‌ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜನವರಿ 8ರಂದು ಅವರು ಮೃತಪಟ್ಟಿದ್ದರು. ಮುಸ್ಲಿಮರು ಹಿಂದೂ ಪೊಲೀಸರ ಮೇಲೆ ದಾಳಿ ದಾಳಿ ನಡೆಸುತ್ತಿದ್ದಾರೆ ಎಂದು ಹಲವು ಸುದ್ದಿ ಮಾಧ್ಯಮಗಳು ವರದಿ ಪ್ರಕಟಿಸಿವೆ. ಆರೋಪಿ ಹೆಸರನ್ನು ಮೊಹಮ್ಮದ್ ಅನೀಶ್ ಎಂದೇ ವರದಿಯಲ್ಲಿ ನಮೂದಿಸಿವೆ. ಬಿಜೆಪಿ ಮತ್ತು ವಿಎಚ್‌ಪಿ ನಾಯಕರೂ ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಆದರೆ, ಪೊಲೀಸರಿಗೆ ಚಾಕು ಇರಿದ ಆರೋಪಿ ಮುಸ್ಲಿಂ ಎಂಬುದು ತಿರುಚಲಾದ ಮಾಹಿತಿ.

ಇದು ತಿರುಚಿದ ಸುದ್ದಿ ಎಂದು ಆಲ್ಟ್‌ ನ್ಯೂಸ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ‘ಜನವರಿ 4ರಂದು ದೆಹಲಿಯ ಮಾಯಾಪುರಿಯಲ್ಲಿ ಈ ಘಟನೆ ನಡೆದಿತ್ತು. ಕಳ್ಳತನದ ಆರೋಪಿಯನ್ನು ಎಎಸ್‌ಐ ಶಂಭು ದಯಾಳ್ ಅವರು ವಶಕ್ಕೆ ಪಡೆದು, ಪೊಲೀಸ್‌ ಠಾಣೆಗೆ ಕರೆದೊಯ್ಯುತ್ತಿದ್ದರು. ಆಗ ಆರೋಪಿಯು ಚಾಕುವಿನಿಂದ ದಯಾಳ್‌ ಅವರನ್ನು ಹಲವು ಭಾರಿ ಇರಿದಿದ್ದ. ಆರೋಪಿಯ ಹೆಸರು ಅನೀಶ್ ಪ್ರಹ್ಲಾದ್‌ ರಾಜ್‌ ಎಂದು ದೆಹಲಿ ಪೊಲೀಸರು ಜನವರಿ ನಾಲ್ಕರಂದು ನೀಡಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದರು. ಆದರೆ, ಆರೋಪಿಯ ಹೆಸರನ್ನು ಬದಲಿಸಿ ಆತ ಮುಸ್ಲಿಂ ಎಂದು ಬಿಂಬಿಸಲಾಗಿದೆ’ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT