ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ‘ಭಾರತದ ಆರ್ಥಿಕತೆಯು ಶ್ರೀಲಂಕಾ ಹಾಗೂ ಪಾಕಿಸ್ತಾನದ ರೀತಿ ಆಗಲಿದೆ. ಜನರು ಹಣ ಕೂಡಿಟ್ಟುಕೊಳ್ಳಬೇಕು’ ಎಂದು ಹೇಳಿದ್ದಾರೆ ಎನ್ನಲಾಗುವ ಪೋಸ್ಟರ್‌ಗಳು ಹರಿದಾಡುತ್ತಿವೆ. ಸಂದರ್ಶನವೊಂದರಲ್ಲಿ ಅವರು ಈ ಮಾತು ಹೇಳಿದ್ದಾರೆ ಎನ್ನಲಾಗಿದೆ. ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಈ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇದು ಸುಳ್ಳು.

ರಾಜನ್ ಅವರು ಶ್ರೀಲಂಕಾದ ಆರ್ಥಿಕತೆ ಜೊತೆ ಭಾರತದ ಆರ್ಥಿಕತೆಯನ್ನು ಹೋಲಿಸಿದ್ದಾರೆ ಎಂಬುದು ತಪ್ಪು ಮಾಹಿತಿ ಎಂದು ‘ದಿ ಕ್ವಿಂಟ್’ ಜಾಲತಾಣ ವರದಿ ಮಾಡಿದೆ. ಎಎನ್‌ಐ ಸುದ್ದಿಸಂಸ್ಥೆಗೆ 2022ರ ಜುಲೈನಲ್ಲಿ ನೀಡಿದ ಸಂದರ್ಶನದಲ್ಲಿ, ಶ್ರೀಲಂಕಾ ಹಾಗೂ ಪಾಕಿಸ್ತಾನದ ಸ್ಥಿತಿಗೂ ಭಾರತದ ಸ್ಥಿತಿಗೂ ಬಹಳ ವ್ಯತ್ಯಾಸವಿದೆ ಎಂದು ರಾಜನ್ ಹೇಳಿದ್ದರು. ‘ಭಾರತದಲ್ಲಿ 500 ಕೋಟಿ ಡಾಲರ್‌ನಷ್ಟು ವಿದೇಶಿ ಮೀಸಲು ನಿಧಿ ಇದೆ. ವಿದೇಶಿ ವಿನಿಮಯ ಗಳಿಕೆ ಹೆಚ್ಚಿಸಲಾಗುತ್ತಿದೆ. ಆದರೆ ಆ ಎರಡೂ ದೇಶಗಳಲ್ಲಿ ವಿದೇಶಿ ಮೀಸಲು ನಿಧಿ ಬರಿದಾಗಿದೆ. ಭಾರತದ ಪರಿಸ್ಥಿತಿ ಅಷ್ಟೊಂದು ಗಂಭೀರವಾಗಿಲ್ಲ’ ಎಂದು ಹೇಳಿದ್ದರು. ತಾವು ಇಂತಹ ಹೇಳಿಕೆ ನೀಡಿಲ್ಲ ಎಂಬುದಾಗಿ ರಾಜನ್ ಸ್ಪಷ್ಪಪಡಿಸಿದ್ದಾರೆ ಎಂದು ‘ದಿ ಕ್ವಿಂಟ್’ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.