ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಸ್ಥಾನದಲ್ಲಿ ರಸ್ತೆ ಅಪಘಾತ: 10 ಮಂದಿ ಸಾವು

Last Updated 2 ಜನವರಿ 2023, 3:15 IST
ಅಕ್ಷರ ಗಾತ್ರ

ಸಿಕರ್: ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಬೈಕ್ ಮತ್ತು ಟ್ರಕ್‌ಗೆ ಎಸ್‌ಯುವಿ ಡಿಕ್ಕಿ ಹೊಡೆದು ಸಂಭವಿಸಿದ ದುರ್ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಲ್ಸಾನಾ-ಖಂಡೇಲ ರಸ್ತೆಯ ಮಜಿ ಸಾಹಬ್ ಕಿ ಧನಿ ಬಳಿ ಭಾನುವಾರ ಅಪಘಾತ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಎಸ್‌ಯುವಿ, ಮೊದಲು ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಬಳಿಕ ಡ್ರಿಲ್ಲಿಂಗ್ ರಿಗ್ ಯಂತ್ರವನ್ನು ಸಾಗಿಸುತ್ತಿದ್ದ ಟ್ರಕ್‌ಗೆ ಮುಖಾಮುಖಿಯಾಗಿ ಎಸ್‌ಯುವಿನಲ್ಲಿದ್ದ ಎಂಟು ಮಂದಿ ಮೃತಪಟ್ಟು, ಕೆಲವರು ಗಾಯಗೊಂಡಿದ್ದಾರೆ.

ಮೃತರನ್ನು ಬೈಕ್‌‌ನಲ್ಲಿದ್ದ ಬೀರ್‌ಬಲ್ (50) ಹಾಗೂ ಅವರ ಪತ್ನಿ ಜಾನಕಿ ದೇವಿ (45) ಎಂದು ಗುರುತಿಸಲಾಗಿದೆ.

ಎಸ್‌ಯುವಿನಲ್ಲಿದ್ದ ಚೋಮು ಪಟ್ಟಣದ ಸಮೋದ್ ನಿವಾಸಿಗಳಾದ ವಿಜಯ್ (27), ಪೂನಂ (26), ಅನುರಾಧ (25), ಅರವಿಂದ (23), ರೇಖಾ (23), ಅಜಯ್ (20), ಗೊಲು (2.5) ಮತ್ತು ನಿಕೂ (1.5) ಮೃತಪಟ್ಟಿದ್ದಾರೆ.

ರಸ್ತೆ ಅಪಘಾತಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಸಂತಾಪ ಸೂಚಿಸಿದ್ದು, ಗಾಯಾಳುಗಳು ಆದಷ್ಟು ಬೇಗನೇ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT