ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ:12 ಮಂದಿ ರೋಹಿಂಗ್ಯಾ ಮುಸ್ಲಿಮರ ಬಂಧನ

Last Updated 1 ಏಪ್ರಿಲ್ 2022, 16:08 IST
ಅಕ್ಷರ ಗಾತ್ರ

ಜಮ್ಮು: ಅಕ್ರಮ ಪ್ರವೇಶ ಆರೋಪದ ಮೇಲೆ 12 ಮಂದಿ ರೋಹಿಂಗ್ಯಾ ಮುಸ್ಲಿಮರನ್ನು ಜಮ್ಮು ಮತ್ತು ಕಾಶ್ಮೀರದ ರಾಂಬಾನ್‌ ಜಿಲ್ಲೆಯಲ್ಲಿ ಶುಕ್ರವಾರ ಬಂಧಿಸಲಾಗಿದೆ.

ಅಮಿರ್‌ ಹಕಂ, ಜಫ್ಫರ್‌ ಅಲಂ, ಮೊಹಮ್ಮದ್‌ ನೂರ್‌, ಅಬ್ದುಲ್‌ ಹಸನ್‌, ಮೊಹಮ್ಮದ್‌ ಅಲಂ, ನೂರ್‌ ಅಮೀನ್‌, ನೂರ್‌ ಹುಸೇನ್‌, ಸಯ್ಯೀದ್‌ ಹುಸೇನ್‌, ಮೊಹಮ್ಮದ್‌ ಸಲೀಂ, ಮೊಹಮ್ಮದ್‌ ಇಸ್ಲಾಯಿಲ್‌, ಕಮಲ್‌ ಹುಸೇನ್‌ ಹಾಗೂ ಮುಸ್ತಾಪ ಹುಸೇನ್‌ ಬಂಧಿತರು.

‘ಬಂಧಿತರೆಲ್ಲರೂ ರಾಂಬಾನ್‌ನ ಗೂಲ್‌ ತಹಶೀಲ್ ವ್ಯಾಪ್ತಿಯ ತಬ್ಲಿಘಿ ಜಮಾತ್‌ನ ಧಾರ್ಮಿಕ ಸಭೆಯೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಜಮ್ಮು ಮತ್ತು ಕಾಶ್ಮೀರವನ್ನು ಅಕ್ರಮ ಪ್ರವೇಶಿಸಿದ ಆರೋಪದ ಮೇಲೆ 12 ಮಂದಿಯನ್ನು ಬಂಧಿಸಿ ಕತುವಾ ಜಿಲ್ಲೆಯ ಹಿರಾನಗರ ಕಾರಾಗೃಹಕ್ಕೆ ಕಳುಹಿಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದರು.

ಬಂಧಿತ ನಿರಾಶ್ರಿತರೆಲ್ಲರೂ ಜಮ್ಮುವಿನ ಭಟಂಡಿ ಹಾಗೂ ನರ್ವಲ್‌ ಪ್ರದೇಶದಲ್ಲಿ ಕಳೆದ 8 ವರ್ಷಗಳಿಂದ ವಾಸವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT