ವರದಿ ಪ್ರಕಾರ, ಸೋಮವಾರ ಆರ್‌ಎಸ್ಎಸ್ ಸ್ವಯಂ ಸೇವಕರೊಬ್ಬರು ಕಬ್ಬಿಣದ ಸರಳು ಕದಿಯುತ್ತಿದ್ದ ಅಪ್ರಾಪ್ತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇದಕ್ಕೆ ಪ್ರತಿಯಾಗಿ, ಅಪ್ರಾಪ್ತನ ಸಂಬಂಧಿ ಆರ್‌ಎಸ್ಎಸ್ ಕಚೇರಿ ಮೇಲೆ ಇಟ್ಟಿಗೆಗಳಿಂದ ದಾಳಿ ಮಾಡುವ ದುಸ್ಸಾಹಸಕ್ಕೆ ಕೈಹಾಕಿದ್ದ ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.