ಆಗ್ರಾ: ಇಲ್ಲಿನ ಟ್ರಾನ್ಸ್ಪೋರ್ಟ್ ನಗರದ ಹರಿಪರ್ವತ್ ಪ್ರದೇಶದಲ್ಲಿರುವ ಬ್ರೆಡ್ ಕಾರ್ಖಾನೆಯೊಂದರಲ್ಲಿ ಓವನ್ ಸ್ಫೋಟಗೊಂಡು 13 ಕಾರ್ಮಿಕರು ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ಹಾವೇರಿಯಲ್ಲಿ ಫ್ರಿಡ್ಜ್ ಸ್ಫೋಟ! ಬೆಚ್ಚಿ ಬಿದ್ದ ಮನೆಯವರು!.
ಬ್ರೆಡ್ಗಳನ್ನು ಬೇಯಿಸಲು ಉಪಯೋಗಿಸುತ್ತಿದ್ದ ದೊಡ್ಡ ಓವನ್ಗಳಲ್ಲಿ ಸ್ಫೋಟ ಸಂಭವಿಸಿದೆ. ಮೆಡ್ಲೆ ಬ್ರೆಡ್ ಫ್ಯಾಕ್ಟರಿಯಲ್ಲಿ ಘಟನೆ ನಡೆದಿದೆ. ಸ್ಫೋಟದ ಸದ್ದು ಕಿಲೋ ಮೀಟರ್ ದೂರದವರೆಗೆ ಕೇಳಿಸಿದೆ.

ಪ್ರತ್ಯಕ್ಷದರ್ಶಿ ನೀಡಿದ ಮಾಹಿತಿ ಪ್ರಕಾರ, ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ಕಾರ್ಖಾನೆಯಲ್ಲಿ ಸುಮಾರು 20 ಮಂದಿ ಕಾರ್ಮಿಕರಿದ್ದರು.

‘ನಾವು ಎಂದಿನಂತೆ ಕೆಲಸ ಮಾಡುತ್ತಿದ್ದೆವು. ಇದ್ದಕ್ಕಿದಂತೆ ಓವನ್ ಸ್ಫೋಟಗೊಂಡಿತು. ಗ್ಯಾಸ್ ಮೂಲಕ ಈ ಓವನ್ಗಳು ಕೆಲಸ ಮಾಡುತ್ತವೆ’ ಎಂದು ಕಾರ್ಖಾನೆಯ ಮ್ಯಾನೇಜರ್ ಜೀತೇಂದ್ರ ಹೇಳಿದ್ದಾರೆ.
.ನೋಯ್ಡಾದ ರಾಸಾಯನಿಕ ಘಟಕದಲ್ಲಿ ಸ್ಫೋಟ; ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ.
ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದೆನ್ನುವುದು ಅವರ ಶಂಕೆ.

ಜೋರಾದ ಶಬ್ದ ಕೇಳಿದ ಸ್ಥಳೀಯರು ಬೇಕರಿ ಸಮೀಪ ಧಾವಿಸಿ, ಗಾಯಾಳುಗಳ ರಕ್ಷಣೆಗೆ ಸಹಕರಿಸಿದ್ದಾರೆ.

13 ಕಾರ್ಮಿಕರನ್ನು ಆ್ಯಂಬುಲೆನ್ಸ್ ಹಾಗೂ ಖಾಸಗಿ ವಾಹನಗಳಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.

‘ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆ ಪೈಕಿ ಮೂವರ ಪರಿಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟಕ್ಕೆ ಕಾರಣ ತಿಳಿಯಲು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಉಪ ಆಯುಕ್ತ ಸೂರಜ್ ರೈ ತಿಳಿಸಿದ್ದಾರೆ.
.2006ರ ನಾಂದೇಡ್ ಸ್ಫೋಟ ಕೃತ್ಯ: ಎಲ್ಲ 9 ಆರೋಪಿಗಳು ಖುಲಾಸೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.