ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅಧಿಕಾರವಧಿಯಲ್ಲಿ 2.2 ಕೋಟಿ ಉದ್ಯೋಗವಕಾಶ ಸೃಷ್ಟಿ: ವರದಿ

Last Updated 14 ಜುಲೈ 2018, 2:15 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2014ರಿಂದ 2017ರ ವರೆಗೆ ಭಾರತದಲ್ಲಿ 2.2 ಕೋಟಿ ಉದ್ಯೋಗವಕಾಶಗಳು ಸೃಷ್ಟಿಯಾಗಿದ್ದು, 2017ರಲ್ಲಿ 1.3 ಕೋಟಿಯಷ್ಟು ಉದ್ಯೋಗವಕಾಶಗಳು ಸೃಷ್ಟಿಯಾಗಿವೆ ಎಂದಿದೆ ಪ್ರಧಾನಿಯವರ ಆರ್ಥಿಕ ಸಲಹಾ ಸಮಿತಿಯ ವರದಿ.

2017ರಲ್ಲಿ ಎಷ್ಟು ಉದ್ಯೋಗವಕಾಶಗಳು ಸೃಷ್ಟಿಯಾಗಿವೆ ಮತ್ತು ಪ್ರತಿ ವರ್ಷ ಎಷ್ಟು ಉದ್ಯೋಗಗಳಿಗೆ ಬೇಡಿಕೆ ಇದೆ ಎಂಬುದನ್ನು ತಿಳಿಯುವುದಕ್ಕಾಗಿ ಪ್ರಧಾನಿಯವರ ಆರ್ಥಿಕ ಸಲಹಾ ಸಮಿತಿಯ ಸದಸ್ಯ ಸುರ್ಜಿತ್ ಭಲ್ಲಾ ಈ ವರದಿ ತಯಾರಿಸಿದ್ದಾರೆ.

ಕೇಂದ್ರ ಸರ್ಕಾರದ ಮುದ್ರಾ ಯೋಜನೆ, ರಸ್ತೆ ಮೊದಲಾದ ಮೂಲ ಸೌಕರ್ಯ ಸೇರಿದಂತೆ ಅಭಿವೃದ್ಧಿ ಯೋಜನೆಗಳು ಹೆಚ್ಚಿನ ಉದ್ಯೋಗವಕಾಶಗಳನ್ನು ಸೃಷ್ಟಿಸಿವೆ.2017-2018 ಆರ್ಥಿಕ ವರ್ಷದಲ್ಲಿ 17ರಿಂದ 30 ಲಕ್ಷ ಉದ್ಯೋಗವಕಾಶಗಳು ನಿರ್ಮಾಣ ವಲಯದಲ್ಲಿ ಸೃಷ್ಟಿಯಾಗಿವೆ ಎಂದು ಈ ವರದಿಯಲ್ಲಿ ಹೇಳಲಾಗಿದೆ,

2017ರಲ್ಲಿ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡುವುದಕ್ಕಾಗಿ ಸೃಷ್ಟಿಯಾಗಿದ್ದು 75 ಲಕ್ಷ ಉದ್ಯೋಗವಕಾಶಗಳು ಮಾತ್ರ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅದೇ ವೇಳೆ ಖಾಸಗಿ ಸಮೀಕ್ಷೆಗಳಲ್ಲಿನ ಲೋಪಗಳನ್ನು ಈ ವರದಿ ಪ್ರಶ್ನಿಸಿದೆ. ಸೆಂಟರ್ ಫಾರ್ ಮೈನಾರಿಟಿ ಇಕಾನಮಿ , ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಮೊದಲಾದವುಗಳು ತಯಾರಿಸಿದ ಸಮೀಕ್ಷಾ ವರದಿಯಲ್ಲಿ 17 ಲಕ್ಷ ಉದ್ಯೋಗಗಳು ಮಾತ್ರ 2017ರಲ್ಲಿ ಸೃಷ್ಟಿಸಲಾಗಿದೆ ಎಂದು ಹೇಳಿವೆ. ಈ ಸಮೀಕ್ಷಾ ವರದಿಯನ್ನು ತಳ್ಳಿ ಹಾಕಿದ ಭಲ್ಲಾ, ಸೆಂಟರ್ ಫಾರ್ ಮೈನಾರಿಟಿ ಇಂಡಿಯನ್ ಇಕಾನಮಿ ವರದಿಯಲ್ಲಿ ಲೋಪ ದೋಷಗಳಿವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT