ಮುಜಾಫರ್ಪುರ:ತೀವ್ರವಾದ ಮೆದುಳಿನ ಉರಿಯೂತ ಸೋಂಕಿನಿಂದ 14 ಮಕ್ಕಳು ಬಿಹಾರದ ಮುಜಾಫರ್ಪುರದಲ್ಲಿ ಮೃತಪಟ್ಟಿದ್ದಾರೆ.

ವೈರಸ್ ಸೋಂಕಿನಿಂದ ಉಂಟಾಗುವ ಮೆದುಳಿನ ಉರಿಯೂತ (ಎನ್ಸೆಫಾಲಿಟಿಸ್ Acute Encephalitis Syndrome (AES) ಹಾಗೂ ತೀವ್ರ ತರದ ಜ್ವರ ಸೋಂಕು, ಮತ್ತಿತರ ರೋಗ ಲಕ್ಷಣಗಳುಳ್ಳ 12ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ನಾವು ಇಲ್ಲಿ 38 ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದೇವೆ. ಅವರದಲ್ಲಿ ಹೆಚ್ಚಿನವರು ತಮ್ಮ ರಕ್ತದಲ್ಲಿ ಗ್ಲುಕೋಸ್ನ ಕೊರತೆ ಹೊಂದಿದ್ದಾರೆ’ ಎಂದು ಶ್ರೀ ಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ(ಎಸ್ಕೆಎಂಸಿಎಚ್) ಅಧೀಕ್ಷಕ ಸುನಿಲ್ ಶಾಹಿ ತಿಳಿಸಿದ್ದಾರೆ.

‘ವಾತಾವರಣದಲ್ಲಿ ಶಾಖ ಮತ್ತು ತೇವಾಂಶ ಹೆಚ್ಚಾದಾಗ ದೇಹದಿಂದ ಬೆವರು ಆವಿಯಾಗಿ ಹೊರ ಹೋಗುವುದಿಲ್ಲ. ವಾತಾವರಣದಲ್ಲಿ ಐದು ದಿನಗಳಿಂದ ತೇವಾಂಶ ಪ್ರಮಾಣ ಶೇ 50ಕ್ಕಿಂತ ಹೆಚ್ಚಾಗಿದೆ. ಪ್ರಸ್ತುತ 15 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿತ್ಯ ಇಂತಹ 8ರಿಂದ 9 ಪ್ರಕರಣಗಳು ಬರುತ್ತವೆ’ ಎಂದು ಆಸ್ಪತ್ರೆಯ ಸಿಸಿ ಘಟಕದ ಡಾ.ಗೋಪಾಲ್ ಸಾಹ್ನಿ ತಿಳಿಸಿದ್ದಾಗಿಎಎನ್ಐ ವರದಿ ಮಾಡಿದೆ.

ಎನ್ಸೆಫಾಲಿಟಿಸ್ ಎಂಬುದು ಜ್ವರ ಅಥವಾ ತಲೆನೋವುಗಳಂತಹ ಸೌಮ್ಯ ರೀತಿಯ ಜ್ವರ ಲಕ್ಷಣಗಳನ್ನು ಉಂಟುಮಾಡುವ ವೈರಾಣುವಿನ ಸೋಂಕು.

* ಇದನ್ನೂ ಓದಿ:ಉತ್ತರ ಪ್ರದೇಶ: ಆಸ್ಪತ್ರೆಯಲ್ಲಿ ನಾಲ್ಕು ದಿನದಲ್ಲಿ 55 ಮಕ್ಕಳು ಸಾವು

ಮೆದುಳಿನ ಉರಿಯೂತ(ಎನ್ಸೆಫಾಲಿಟಿಸ್) ಮತ್ತು ಇತರ ರೋಗಗಳಿಂದ 2017ರ ನವೆಂಬರ್ನಲ್ಲಿಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರ ಗೋರಖಪುರದ ಬಿಆರ್ಡಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳ ಸಾವಿನ ಸರಣಿ ನಡೆದಿತ್ತು.ನಾಲ್ಕು ದಿನಗಳಲ್ಲಿನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿನ(ಎನ್ಐಸಿಯು) 29 ಮಕ್ಕಳು ಸೇರಿದಂತೆ 55 ಮಕ್ಕಳು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.