ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಗಳಿಂದ ಭಾರಿ ಮಳೆ ಸುರಿಯುತ್ತಿದ್ದು, 15 ರಸ್ತೆಗಳ ಸಂಚಾರ ಬಂದ್ ಮಾಡಲಾಗಿದೆ.

ರಾಜ್ಯದ ಹಲವೆಡೆ ಮುಂದಿನ 4 ದಿನ ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ ಎಂದು ಹವಾಮಾನ ಇಲಾೆೆಖ ತಿಳಿಸಿದೆ.

ಮಂಡಿ ಜಿಲ್ಲೆಯ 12, ಕಿನ್ನೌರ್ನ 2 ಮತ್ತು ಕಾಂಗ್ರಾದ 1 ಪ್ರಮುಖ ರಸ್ತೆ ಬಂದ್ ಆಗಿದೆ. ರಾಜ್ಯದಲ್ಲಿ 62 ವಿದ್ಯುತ್ ಪರಿವರ್ತಕಗಳು ಹಾನಿಗೀಡಾಗಿವೆ.

ಭಾರಿ ಬಿರುಗಾಳಿ ಮತ್ತು ಪ್ರವಾಹ ಸ್ಥಿತಿಯಿಂದಾಗಿ ತೋಟಗಳು, ಶಿಥಿಲಾವಸ್ಥೆಯ ಕಟ್ಟಡಗಳು. ಕಚ್ಚಾ ಮನೆಗಳಿಗೆ ಹಾನಿಯಾಗಬಹುದು ಎಂದು ರಾಜ್ಯದ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.

ಬೈಜನಾಥ್ನಲ್ಲಿ ದಾಖಲೆಯ 85 ಮಿ ಮೀ ಮಳೆ ಬಿದ್ದಿದೆ. ಪಲಾಂಪುರ್ (25.2 ಮಿ.ಮೀ) ಜೋಗಿಂದರ್ ನಗರ್ (18 ಮಿ.ಮೀ), ಧರ್ಮಶಾಲಾ (10.4 ಮಿ.ಮೀ), ಹಮೀಪರ್ (8 ಮಿ.ಮೀ), ಪೊಯಾಂಟ ಸಾಹಿಬ್ (7.6 ಮಿ ಮೀ) ಭಾರಿ ಮಳೆ ಸುರಿದಿದೆ.

ಈ ವರ್ಷದ ಮಳೆ ಸಂಬಂಧಿತ ಅವಘಡಗಳಲ್ಲಿ 49 ಮಂದಿ ಮೃತಪಟ್ಟಿದ್ದು, ₹389 ಕೋಟಿಗೂ ಅಧಿಕ ಆಸ್ತಿ ನಷ್ಟ ಸಂಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.