ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಜೋರಾಂಗೆ ಬಂದ 151 ಮ್ಯಾನ್ಮಾರ್‌ ಸೈನಿಕರು

Published 30 ಡಿಸೆಂಬರ್ 2023, 19:00 IST
Last Updated 30 ಡಿಸೆಂಬರ್ 2023, 19:00 IST
ಅಕ್ಷರ ಗಾತ್ರ

ಐಜ್ವಾಲ್ : ಮ್ಯಾನ್ಮಾರ್‌ನ ಸೇನಾ ಶಿಬಿರಗಳ ಮೇಲೆ ಆ ದೇಶದ ಬುಡಕಟ್ಟು ಜನಾಂಗ ಶಸ್ತ್ರಸಜ್ಜಿತವಾಗಿ ಆಕ್ರಮಣ ಮಾಡಿದ್ದರಿಂದಾಗಿ ಸುಮಾರು 150 ಯೋಧರು ಶುಕ್ರವಾರ ಮಿಜೋರಾಂನ ಲೌಂಗಲಾಯ್ ಜಿಲ್ಲೆಗೆ ಪಲಾಯನ ಮಾಡಿದ್ದಾರೆ ಎಂದು ಅಸ್ಸಾಂ ರೈಫಲ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಮ್ಯಾನ್ಮಾರ್‌ನ ಅರಾಕನ್ ಸೇನೆಯು ಗಡಿ ಭಾಗದಲ್ಲಿರುವ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸುತ್ತಿದೆ. ಅಲ್ಲದೆ, ಮ್ಯಾನ್ಮಾರ್ ಸೇನೆ ಮತ್ತು ಅರಾಕನ್ ಸೇನಾ ಯೋಧರ ಮಧ್ಯೆ ಕಳೆದ ಕೆಲವು ದಿನಗಳಿಂದ ಗುಂಡಿನ ಕಾಳಗವೂ ನಡೆಯುತ್ತಿದೆ. ಮಿಜೋರಾಂಗೆ ಬಂದ ಯೋಧರ ಪೈಕಿ ಕೆಲವರು ಗಾಯಗೊಂಡಿದ್ದು, ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದರು. 

ಈ ಸಂಬಂಧ ಮ್ಯಾನ್ಮಾರ್ ಸೇನಾ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯದ ಮಧ್ಯೆ ಮಾತುಕತೆ ನಡೆಯುತ್ತಿದ್ದು, ಕೆಲವು ದಿನಗಳ ಬಳಿಕ ಈ ಯೋಧರನ್ನು ವಾಪಸ್ ಕಳುಹಿಸಲಾಗುತ್ತದೆ ಎಂದರು. 

ನವೆಂಬರ್ ತಿಂಗಳಿನಲ್ಲೂ ಒಟ್ಟಾರೆ 104 ಮ್ಯಾನ್ಮಾರ್ ಯೋಧರು ಆಶ್ರಯ ಅರಸಿ ಮಿಜೋರಾಂಗೆ ಬಂದಿದ್ದರು. ಆ ಬಳಿಕ ಅವರನ್ನು ಮಣಿಪುರದ ಮೋರೆಗೆ ಕಳುಹಿಸಿಕೊಡಲಾಯಿತು. ಅಲ್ಲಿಂದ ಅವರು ಮ್ಯಾನ್ಮಾರ್‌ಗೆ ತೆರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT