ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾವೊಸ್‌ನಲ್ಲಿ ಅಸುರಕ್ಷಿತ ಕೆಲಸಗಳಿಗೆ ನಿಯೋಜನೆ: 17 ಭಾರತೀಯರ ರಕ್ಷಣೆ

Published 6 ಏಪ್ರಿಲ್ 2024, 16:02 IST
Last Updated 6 ಏಪ್ರಿಲ್ 2024, 16:02 IST
ಅಕ್ಷರ ಗಾತ್ರ

ನವದೆಹಲಿ: ‘ಲಾವೊಸ್‌ನಲ್ಲಿ ಅಸುರಕ್ಷಿತ ಮತ್ತು ನಿಯಮಬಾಹಿರ ಕೆಲಸಗಳಿಗೆ ನಿಯೋಜಿಸಲಾಗಿದ್ದ 17 ಮಂದಿ ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಶನಿವಾರ ಇಲ್ಲಿ ತಿಳಿಸಿದ್ದಾರೆ. 

ದೇಶ ಮತ್ತು ವಿದೇಶಗಳಲ್ಲೂ ಮೋದಿ ಕೀ ಗ್ಯಾರಂಟಿ ಫಲ ನೀಡಲಿದೆ. ಅಲ್ಲಿನ ಭಾರತೀಯ ರಾಯಭಾರ ಕಚೇರಿಯ ಶ್ರಮ ಶ್ಲಾಘನೀಯ.  ಎಂದು ಈ ಸಂಬಂಧ ಅವರು ‘ಎಕ್ಸ್‌’ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಾಂಬೋಡಿಯಾದಲ್ಲಿ ಉದ್ಯೋಗಾವಕಾಶ ಕುರಿತು ಆಮಿಷ ಒಡ್ಡುವ ಮಾನವ ಕಳ್ಳಸಾಗಣೆ ಕುರಿತು ಜಾಗ್ರತೆ ಇರಬೇಕು. ಉದ್ಯೋಗದಾತರ ಹಿನ್ನೆಲೆ ಪರಿಶೀಲಿಸಬೇಕು ಎಂದು ವಿದೇಶಗಳಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಭಾರತೀಯರಿಗೆ ಸಚಿವಾಲಯವು ಸಲಹೆ ಮಾಡಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT