ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18.5 ಅಡಿ ಎತ್ತರದ ಕಾಳಿ ವಿಗ್ರಹ: ಜೈಪುರದಿಂದ ಕೇರಳದತ್ತ

Published 28 ಏಪ್ರಿಲ್ 2024, 12:27 IST
Last Updated 28 ಏಪ್ರಿಲ್ 2024, 12:27 IST
ಅಕ್ಷರ ಗಾತ್ರ

ಜೈಪುರ: ಪ್ರಸಿದ್ಧ ರಾಜಸ್ಥಾನ ಮಾರ್ಬಲ್‌ನಲ್ಲಿ ಕೆತ್ತಿದ 18.5 ಅಡಿ ಉದ್ದದ ಕಾಳಿ ಮಾತೆಯ ಏಕಶಿಲಾ ವಿಗ್ರಹವು ರಾಜಸ್ಥಾನದಿಂದ ಕೇರಳಕ್ಕೆ ತರಲಾಗುತ್ತಿದೆ.

18.5 ಅಡಿಯ ವಿಗ್ರಹ ಇತಿಹಾಸದಲ್ಲಿ ದಾಖಲಾಗಲಿದೆ. ತಿರುವನಂತಪುರ ಪೌರ್ಣಮಿಕವು ದೇಗುಲದಲ್ಲಿ ಈ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಜೈಪುರದ ಪ್ರಸಿದ್ಧ ಶಿಲ್ಪಿ ಮುಕೇಶ್ ಭಾರದ್ವಾಜ್ ಈ ವಿಗ್ರಹವನ್ನು ಕೆತ್ತಿದ್ದು, 30x20 ಅಡಿ ವಿಸ್ತೀರ್ಣದ 45-50 ಟನ್ ತೂಕದ ಒಂದೇ ಶಿಲೆಯನ್ನು ಇದಕ್ಕೆ ಬಳಸಲಾಗಿದೆ.

12 ಅಡಿ ಎತ್ತರದ ದುರ್ಗಾ ಮಾತೆ ಮತ್ತು ರಾಜ ಮಧಂಗಿ ದೇವಿ ವಿಗ್ರಹದ ಹಿಂಬದಿಯಲ್ಲಿ ಕಾಳಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ.

'ಕಾಳಿ ದೇವಿಯ ಪ್ರತಿಷ್ಠಾಪನೆ ಮತ್ತು ದುರ್ಗಾ ಹಾಗೂ ಲಕ್ಷ್ಮಿ ದೇವತೆಗಳ ಪ್ರತಿಷ್ಠಾಪನಾ ಸಮಾರಂಭವು ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಂತೆಯೇ ಇರುತ್ತದೆ. ಇದು ಶಕ್ತಿಯುತ ಮತ್ತು ಪೂಜ್ಯ ಹಿಂದೂ ದೇವತೆಗಳ ವಾಸಸ್ಥಾನವಾಗಲಿದೆ’ ಎಂದು ದೇವಸ್ಥಾನದ ಮುಖ್ಯಸ್ಥ ಎಂ.ಎಸ್. ಭುವನಚಂದ್ರನ್ ತಿಳಿಸಿದ್ದಾರೆ.

ಎಲ್ಲ ಮೂರು ಮೂರ್ತಿಗಳನ್ನು ಜೈಪುರದಿಂದಲೇ ತರಲಾಗುತ್ತಿದೆ.

ದೇವತೆಗಳ ವಿಗ್ರಹಗಳ ಜೊತೆ ಪುರಾಣದಲ್ಲಿ ನಂಬಲಾಗಿರುವಂತೆ ಶಕ್ತಿ ದೇವತೆಗಳ ವಾಹನಗಳಾದ ಸೊ'ಹ, ಹುಲಿ, ನವಿಲು ಮತ್ತು ಹಂಸದ ವಿಗ್ರಹಗಳನ್ನು ಸಹ ತರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಭಾನುವಾರ ಪೂಜೆ ನೆರವೇರಿಸಿ ವಿಗ್ರಹಗಳನ್ನು ಕೇರಳಕ್ಕೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT